ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕಸಾಪ: ಅಧ್ಯಕ್ಷರ ಅಧಿಕಾರಾವಧಿ ಇಳಿಯಲಿ

ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆಯ ಧ್ವನಿಯಾಗಿ ಕಾರ್ಯನಿರ್ವಹಿಸುವ ಪ್ರತಿಷ್ಠಿತ ಸಂಸ್ಥೆ. ಇಂತಹ ಮಹತ್ವದ ಸಂಸ್ಥೆಯ ರಾಜ್ಯ, ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ಈಗಷ್ಟೇ ಚುನಾವಣೆ ನಡೆದು ಹೊಸ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಕಳೆದ ಅವಧಿಯಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಘಟಕಗಳ ಅಧ್ಯಕ್ಷರ ಅಧಿಕಾರಾವಧಿಯನ್ನು ಹಲವರ ವಿರೋಧದ ನಡುವೆಯೂ ಮೂರು ವರ್ಷದಿಂದ ಐದು ವರ್ಷಗಳಿಗೆ ವಿಸ್ತರಿಸಲಾಗಿತ್ತು. ಅಲ್ಲದೆ ಸದಸ್ಯತ್ವ ಶುಲ್ಕವನ್ನು ₹ 500ಕ್ಕೆ ಏರಿಸಲಾಗಿತ್ತು. ಕಸಪಾ ನೂತನ ಅಧ್ಯಕ್ಷರು, ಸದಸ್ಯತ್ವ ಶುಲ್ಕವನ್ನು ₹ 250ಕ್ಕೆ ಇಳಿಸುವುದಾಗಿ ಮತ್ತು ತಾಲ್ಲೂಕು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ಹೇಳಿರುವುದು ಒಳ್ಳೆಯ ತೀರ್ಮಾನವಾಗಿದೆ. ಇದರ ಜೊತೆಗೆ ಅಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷದಿಂದ ಮೊದಲು ಇದ್ದಂತೆ ಮೂರು ವರ್ಷಕ್ಕೆ ಇಳಿಸುವ ಮೂಲಕ, ನಾಡು-ನುಡಿಯ ಸೇವೆ ಮಾಡಲು ಉತ್ಸುಕತೆಯಿಂದ ಕಾಯುತ್ತಿರುವ ಹೊಸ ಪ್ರತಿಭೆಗಳಿಗೆ ಕನ್ನಡದ ಕೆಲಸ ಮಾಡಲು ಅವಕಾಶ ದೊರಕಿಸಲು ಮುಂದಾಗಬೇಕು.

-ಡಾ. ನಂದೀಶ್ವರ ದಂಡೆ, ಕೊಂಡನಾಯಕನಹಳ್ಳಿ, ಹೊಸಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT