ಸಮತೋಲನ ಕಾಪಾಡಿ

7

ಸಮತೋಲನ ಕಾಪಾಡಿ

Published:
Updated:

‘ನಮ್ಮ ನ್ಯಾಯದ ತಕ್ಕಡಿಯ ಅಸಮತೋಲನ’ (ಪ್ರ.ವಾ.,ಆ. 8) ಲೇಖನ ಓದಿ ಅಚ್ಚರಿ ಎನಿಸಿತು. ‘ಸುಪ್ರೀಂ ಕೋರ್ಟ್’ಎಂಬ ನ್ಯಾಯಮಂದಿರ ಸ್ಥಾಪನೆಯಾಗಿ 68 ವರ್ಷ ಕಳೆದರೂ ಇದುವರೆಗೆ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ಮಹಿಳೆಯರ ಸಂಖ್ಯೆ ಕೇವಲ 8. ಆದರೆ ಪುರುಷ ನ್ಯಾಯಮೂರ್ತಿಗಳ ಸಂಖ್ಯೆ 220ಕ್ಕೂ ಹೆಚ್ಚು!

ಸಂವಿಧಾನದಲ್ಲಿ ಅಳವಡಿಸಿಕೊಂಡಿರುವ ಸಮಾನತೆಯ ತತ್ವ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತ, ತೀರ್ಪನ್ನು ನೀಡುವ ಸುಪ್ರೀಂ ಕೋರ್ಟ್‌ ಸಹ ಪುರುಷ ಮಯವಾಗಿದೆ ಎಂಬುದು ಸಂವಿಧಾನದ ಅಣಕ. ಸುಪ್ರೀಂ ಕೋರ್ಟ್‌ ಸ್ಥಾಪನೆಯಾಗಿ 39 ವರ್ಷಗಳ ಬಳಿಕ ಮೊದಲ ಮಹಿಳಾ ನ್ಯಾಯಮೂರ್ತಿಯ ನೇಮಕವಾಯಿತು. ಯಾಕೆ ಇಷ್ಟು ವಿಳಂಬ, ಯಾವ ಕಾರಣಕ್ಕಾಗಿ ಈ ತಾರತಮ್ಯ? ಪುರುಷನಷ್ಟೇ ಸಾಮರ್ಥ್ಯವಿದ್ದು, ಹಲವಾರು ವ್ಯಾಜ್ಯಗಳ ನ್ಯಾಯ ತೀರ್ಮಾನ ಮಾಡಿ, ನೊಂದವರಿಗೆ ನ್ಯಾಯ ಕೊಡಿಸುತ್ತಾ, ವೃತ್ತಿಘನತೆಯನ್ನು ಎತ್ತಿ ಹಿಡಿಯುತ್ತಿರುವ ಮಹಿಳಾ ನ್ಯಾಯಮೂರ್ತಿಗಳು ನಮ್ಮಲ್ಲಿಲ್ಲವೇ?

ಸುಪ್ರೀಂ ಕೋರ್ಟ್‌ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಂಡು ಸಮಾನತೆಯ ತತ್ವವನ್ನು ಎತ್ತಿ ಹಿಡಿಯಬೇಕು.

ಮಂಜುನಾಥ್ ಟಿ.ಎಸ್., ತರುವೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !