ಬುಧವಾರ, ಜೂನ್ 29, 2022
26 °C

ಬಸ್ಸುಗಳಲ್ಲಿ ಇರಲಿ ಅಂತರ

ನಟರಾಜು ಜಿ. ಶಾಹೂ, ಕೊಳ್ಳೇಗಾಲ Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಮೂಲ ಸೌಕರ್ಯವಾದ ಸಾರಿಗೆ ಸೌಲಭ್ಯದ ಕೊರತೆ ಎದ್ದು ಕಂಡಿತು. ಮತದಾನ ಮಾಡಲು ರಾಜ್ಯದ ಪ್ರಮುಖ ನಗರ, ಪಟ್ಟಣಗಳಿಂದ ತಮ್ಮ ತಮ್ಮ ಹಳ್ಳಿಗಳಿಗೆ ಹೊರಟ ಮತದಾರರು ಬಸ್ಸುಗಳ ಕೊರತೆಯಿಂದ ಸರಿಯಾದ ಸಮಯಕ್ಕೆ ತಲುಪಲು ಕಷ್ಟಪಡಬೇಕಾಯಿತು. ಇದರಿಂದ ಎಷ್ಟೋ ಮತದಾರರು ಮತದಾನದಿಂದ ವಂಚಿತರಾದ ಉದಾಹರಣೆಗಳೂ ಇವೆ.

ಅಲ್ಲದೆ, ಬಂದ ಕೆಲವೇ ಬಸ್ಸುಗಳಲ್ಲಿ ಆಸನದ ಮಿತಿಯನ್ನು ಮೀರಿ ಜನ ಪ್ರಯಾಣಿಸಿದರು. ಇದನ್ನು ಕಂಡಾಗ, ಕೊರೊನಾ ವೈರಾಣುವಿನ ಎರಡನೇ ಅಲೆ ಹಬ್ಬುತ್ತಿರುವ ಸಂದರ್ಭದಲ್ಲಿ, ಈ ಸಾಂಕ್ರಾಮಿಕ ಇನ್ನಷ್ಟು ಹೆಚ್ಚಾಗಲು ನಾವೇ ಅನುವು ಮಾಡಿಕೊಟ್ಟಂತೆ ಭಾಸವಾಯಿತು. ಮತ್ತೆ ಇಂತಹ ತಪ್ಪು ಮರುಕಳಿಸದಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು.

–ನಟರಾಜು ಜಿ. ಶಾಹೂ, ಕೊಳ್ಳೇಗಾಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು