ಸೋಮವಾರ, ಮಾರ್ಚ್ 8, 2021
27 °C

ಕೊಡಗಿನ ನೆರೆ: ಭಾವನೆಗೂ ಸ್ಪಂದಿಸೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗಿನ ನೆರೆ ಅರಗಿಸಿಕೊಳ್ಳಲಾಗದ ವಾಸ್ತವ. ಅಲ್ಲಿನ ಸಂತ್ರಸ್ತ ಜನರಿಗೆ ಆರ್ಥಿಕ ಅಗತ್ಯಗಳಷ್ಟೇ ಭಾವನಾತ್ಮಕ ಸ್ಪಂದನೆಯೂ ಅವಶ್ಯಕ. ರಜಾ ದಿನಗಳನ್ನು ಕಳೆಯಲು ನಾವೆಲ್ಲ ಅದೆಷ್ಟೋ ಬಾರಿ ಕೊಡಗಿಗೆ ಹೋಗಿದ್ದೇವೆ. ಅಲ್ಲಿನ ಜನರು ಸಂಕಷ್ಟದಲ್ಲಿರುವಾಗ, ‘ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ’ ಎಂಬ ಭರವಸೆ ಮೂಡಿಸಬೇಕಾಗಿದೆ.

ಭೌತಿಕ ವಸ್ತುಗಳ ಜೊತೆಗೆ ಸಂತ್ರಸ್ತರ ಮಾನಸಿಕ ಅಗತ್ಯಗಳನ್ನು ಸಹ ಅರಿತುಕೊಂಡು ಅವರಿಗೆ ಬಹು ಆಯಾಮದ ಪರಿಹಾರ ಮಾದರಿಯನ್ನು ರೂಪಿಸಬೇಕಾಗಿದೆ.

ಗುಂಪು ಚರ್ಚೆಗಳು, ಯೋಗ, ಧ್ಯಾನ, ಪ್ರಾರ್ಥನೆ, ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಅವರಲ್ಲಿ ವಾಸ್ತವದ ಅರಿವು ಮೂಡಿಸಬೇಕು. ‘ಪರಿಸ್ಥಿತಿ ಬದಲಾಗುತ್ತದೆ, ಬದುಕು ಮತ್ತೆ ಸಹಜ ಸ್ಥಿತಿಗೆ ಬರುತ್ತದೆ’ ಎಂಬ ಭರವಸೆಯನ್ನು ಪುನರ್ವಸತಿ ಕೇಂದ್ರಗಳಲ್ಲಿರುವ ಜನರಲ್ಲಿ ಮೂಡಿಸಬೇಕು. ಅದಕ್ಕಾಗಿ ಎಲ್ಲರೂ ಬಿಡುವು ಮಾಡಿಕೊಂಡು, ಪುನರ್ವಸತಿ ಕೇಂದ್ರಗಳಿಗೆ ಒಂದೆರಡು ಬಾರಿಯಾದರೂ ಭೇಟಿ ನೀಡೋಣ.

-ಡಾ. ಶ್ವೇತಾ ಬಿ.ಸಿ., ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು