ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಎಲ್ಲ ಅಕ್ರಮದ ಮೇಲೂ ಕಣ್ಗಾವಲು?

Last Updated 10 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಳ್ಳಮಾರ್ಗದ ಮೂಲಕ ಎದುರಿಸುವ ಅಭ್ಯರ್ಥಿಗಳ ಪತ್ತೆಗೆ ಐರಿಸ್ (ಕಣ್ಣಿನ ಪಾಪೆ) ಸ್ಕ್ಯಾನ್‌ನಂತಹ ಅತ್ಯಾಧುನಿಕ ‘ಕಣ್ಗಾವಲು’ ವ್ಯವಸ್ಥೆ ಅಳವಡಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮುಂದಾಗಿರುವುದು ಸ್ವಾಗತಾರ್ಹ. ಆದರೆ ಕೆಪಿಎಸ್‌ಸಿ, ಪರೀಕ್ಷಾಪೂರ್ವ ಮತ್ತು ಪರೀಕ್ಷಾ ನಂತರದ ಅಕ್ರಮಗಳಾದಂತಹ ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ತಿದ್ದುಪಡಿ ಯಂತಹ ಕೃತ್ಯಗಳನ್ನೂ ತಡೆಯಲು ಮುಂದಾಗುವುದೇ?. ಈ ಹಿಂದೆ, ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ, ಕೆಪಿಎಸ್‌ಸಿಯನ್ನು ಮುಚ್ಚುವುದೇ ಲೇಸು ಎಂದು ಹೈಕೋರ್ಟ್ ಹೇಳಿದ್ದುದನ್ನು ಮರೆಯುವಂತಿಲ್ಲ.

–ಬಿ.ಪಂಪಾಪತಿ ಶರಣಪ್ಪ, ತಿಮ್ಮಾಪುರ, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT