ಶುಕ್ರವಾರ, ನವೆಂಬರ್ 22, 2019
23 °C

ಎದೆ ಬಗೆದು ಅಭಿಮಾನ ತೋರಬೇಕೇ?

Published:
Updated:

‘ರಾಷ್ಟ್ರಭಕ್ತಿ ಹೊಂದಿರುವ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ. ಯಾರಿಗೆ ಪಾಕಿಸ್ತಾನದ ಪರ ಒಲವಿದೆಯೋ ಅವರು ಮತ ಹಾಕಲು ಹಿಂದೇಟು ಹಾಕುತ್ತಾರೆ’ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ (ಪ್ರ.ವಾ., ಸೆ. 16). ಇದೊಂದು ಹಾಸ್ಯಾಸ್ಪದ ಹೇಳಿಕೆ.

ಭಾರತದ ಬಗ್ಗೆ ಅಭಿಮಾನ ಇರುವ ಮುಸ್ಲಿಮರು ನಿಮಗೆ ಅವರ ಎದೆ ಬಗೆದು ತೋರಿಸಬೇಕೇ? ಮತದಾನ ಅವರವರ ವೈಯಕ್ತಿಕ ಸಾಂವಿಧಾನಿಕ ಹಕ್ಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಅಷ್ಟಕ್ಕೂ ಮುಸ್ಲಿಮರಲ್ಲದ ಎಲ್ಲರೂ ಬಿಜೆಪಿಗೆ ಮತ ಹಾಕಿದ್ದಾರೆಯೇ?

ಪ್ರಜಾಪ್ರಭುತ್ವದಲ್ಲಿ ನಾಗರಿಕರು ತಮಗೆ ಇಷ್ಟ ಬಂದವರಿಗೆ ಮತ ಹಾಕುತ್ತಾರೆ. ಆದರೆ, ಅದನ್ನೇ ರಾಷ್ಟ್ರಭಕ್ತಿಯ ಮಾನದಂಡವನ್ನಾಗಿ ಯಾಕೆ ಮಾಡುತ್ತೀರಿ? ದೇಶಭಕ್ತಿ ಹೃದಯಾಂತರಾಳದ ವಿಷಯ. ಅದು ಡಂಗುರ ಸಾರಿ ತೋರಿಸುವಂತಹದ್ದಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

-ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಪ್ರತಿಕ್ರಿಯಿಸಿ (+)