ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕಲಸ್ನೇಹಿ’ ಇರಲಿ

Last Updated 30 ಏಪ್ರಿಲ್ 2019, 16:28 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್‌ಟಿಸಿ) ಉತ್ತಮ ಸೇವೆಗಾಗಿ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಚಾರ. ಆದರೆ, ಸಮಾಜದ ದುರ್ಬಲ ವರ್ಗವಾದ ಅಂಗವಿಕಲರಿಗೆ ನಿಲ್ದಾಣಗಳಲ್ಲಿ ಎಲ್ಲಿಯೂ ಬಸ್ಸನ್ನು ಹತ್ತಲು ಮತ್ತು ಇಳಿಯಲು ‘ಅಂಗವಿಕಲಸ್ನೇಹಿ’ ವಾತಾವರಣ ಕಲ್ಪಿಸದಿರುವುದು ಹಾಗೂ ಕೋರಿಕೆ ನಿಲುಗಡೆ ನೀಡದಿರುವುದು ದುರದೃಷ್ಟಕರ.

ಅಧಿಕಾರಿಗಳೂ ಒಳಗೊಂಡಂತೆ ನಿರ್ವಾಹಕ- ಚಾಲಕರಿಗೆ ಅಂಗವಿಕಲರ ಕಾಯ್ದೆ ಮತ್ತು ಹಕ್ಕುಗಳ ಬಗ್ಗೆ ತಿಳಿವಳಿಕೆಯ ಕೊರತೆಯೂ ಇದೆ. ಇದರಿಂದ ಎಷ್ಟೋ ಸಂದರ್ಭಗಳಲ್ಲಿ ಅಂಗವಿಕಲರು ಪರಿತಪಿಸುವಂತಾಗಿದೆ. ಒಂದು ಸಂಸ್ಥೆಯ ಸೇವೆಯು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಿದಾಗ ಮಾತ್ರ ಆ ಸಂಸ್ಥೆ ಪಡೆಯುವ ಪ್ರಶಸ್ತಿಗಳಿಗೆ ಅರ್ಥ ಮತ್ತು ಮೌಲ್ಯ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT