ಗುರುವಾರ , ಡಿಸೆಂಬರ್ 12, 2019
17 °C

ಈಗೇಕೆ ಜಾತಿ ವಿಚಾರ?

Published:
Updated:

ಬಂಜಗೆರೆ ಜಯಪ್ರಕಾಶ್‌ ಅವರು ‘ಕುವೆಂಪು ಮೂಲ ಜೈನ, ಭೈರಪ್ಪ ವೈದಿಕ ಬ್ರಾಹ್ಮಣರಲ್ಲ’ ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ ಪಂಪನ ಜಾತಿಯ ಬಗ್ಗೆಯೂ ಹೇಳಿದ್ದಾರೆ‌.

ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಜಾತಿಭಾವನೆಗಳನ್ನು ಜಾಗೃತಗೊಳಿಸಿದ್ದಾರಷ್ಟೇ ಹೊರತು ಮತ್ತೇನಿಲ್ಲ. ಹೌದು, ಈಗ ಈ ಜಾತಿಯಿಂದ ಆಗಬೇಕಾದುದೇನು ಎಂಬುದು ಅರ್ಥವಾಗಲಿಲ್ಲ. ಅಷ್ಟಕ್ಕೂ ಅವರ ಕೃತಿಗಳನ್ನು ಜಾತಿಯ ಮುಖಾಂತರ ಓದುತ್ತ ಬಂದಿದ್ದೇವೆಯೇ? ಹಾಗೆ ನೋಡಿದರೆ ಪಂಪ, ಕುವೆಂಪು ಜಾತಿಯಿಂದ ಬಹುದೂರವಿದ್ದರು. ಭೈರಪ್ಪನವರೂ ಇದಕ್ಕೆ ಹೊರತೇನಲ್ಲ. ಹೀಗಿದ್ದೂ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ, ಜನರ ಮನಸ್ಸನ್ನು ವಿಚಲಿತಗೊಳಿಸುವುದು ಎಷ್ಟು ಸರಿ?

–ಶಂಕರೇಗೌಡ ತುಂಬಕೆರೆ, ಮಂಡ್ಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು