ಕೆರೆಗಳು ಅನಿವಾರ್ಯ

7

ಕೆರೆಗಳು ಅನಿವಾರ್ಯ

Published:
Updated:

ರಾಜ್ಯದಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ. ಈ ವರ್ಷ ಎಲ್ಲಾ ಜಲಾಶಯಗಳು ತುಂಬಲೂಬಹುದು. ಆದರೆ ಎಲ್ಲ ವರ್ಷಗಳಲ್ಲೂ ಹೀಗೇ ಆಗಲಾರದು ಎಂಬುದನ್ನು ನೆನಪಿನಲ್ಲಿಡಬೇಕು.

ಹಿಂದೆ ಊರಿಗೊಂದೆರಡು ಕೆರೆಗಳಿರುತ್ತಿದ್ದವು. ಒಂದು ವರ್ಷ ಮಳೆ ಸ್ವಲ್ಪ ಕಡಿಮೆ ಆದರೂ ಮಳೆನೀರೆಲ್ಲ ಕೆರೆಗಳಿಗೆ ಹರಿಯುವಂತೆ ವ್ಯವಸ್ಥೆ ಮಾಡಿಕೊಂಡು ಬೆಳೆಗಳನ್ನು ಕಾಪಾಡಿಕೊಳ್ಳುತ್ತಿದ್ದರು. ಹಿಂದೆ ರಾಜರು ಕೂಡ ಕೆರೆಗಳ ನಿರ್ಮಾಣದಲ್ಲಿ ಆಸಕ್ತಿ ವಹಿಸಿದ್ದರು. ಈಗಿನ ಸರ್ಕಾರವು ಇರುವ ಕೆರೆಗಳನ್ನಾದರೂ ಉಳಿಸಿ, ಸ್ವಚ್ಛಗೊಳಿಸಿದರೆ ಜಲಾಶಯಗಳ ಜೊತೆಯಲ್ಲೇ ಕೆರೆಗಳೂ ತುಂಬುತ್ತಿದ್ದವು. ಕೃಷಿಗೆ ಬೇಕಾದಷ್ಟು ನೀರು ಲಭಿಸಿದರೆ ರೈತರಿಗೆ ಸಾಲ ಮನ್ನಾಕ್ಕಿಂತ ಹೆಚ್ಚು ಸಹಾಯಕವಾಗುತ್ತದೆ.

ಮಳೆಗಾಲ ಕಳೆದ ನಂತರ ಇತರ ರಾಜ್ಯಗಳಿಗೆ ನೀರು ಬಿಡುವ ಅನಿವಾರ್ಯ ಇರುವಾಗ, ಕೆರೆಗಳೂ ಇಲ್ಲದೆ, ಇರುವ ಕೆರೆಗಳಿಗೆ ನೀರು ತುಂಬಿಸುವ ವ್ಯವಸ್ಥೆಯೂ ಇಲ್ಲದೆ ರೈತರ ಕಷ್ಟ ಹೇಳತೀರದಾಗುತ್ತದೆ. ಸರ್ಕಾರವು ಕೆರೆಗಳ ಪುನರುಜ್ಜೀವಕ್ಕೆ ಟೊಂಕಕಟ್ಟಿ ನಿಂತರೆ ರೈತರ ಬದುಕು ಹಸನಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !