ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅವಕಾಶಗಳಿಗೆ ತೊಡಕಾಗದಿರಲಿ ಭಾಷೆ

Last Updated 1 ಜೂನ್ 2022, 19:30 IST
ಅಕ್ಷರ ಗಾತ್ರ

2021ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 26 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಯುಪಿಎಸ್‌ಸಿ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಅನುವು ಮಾಡಿಕೊಟ್ಟರೆ ಕನ್ನಡದ ಇನ್ನೂ ಹೆಚ್ಚಿನ ಪ್ರತಿಭೆಗಳು ತೇರ್ಗಡೆ ಹೊಂದಬಹುದು.

ಈ ಪರೀಕ್ಷೆಯು ಕ್ಲಿಷ್ಟವಾಗಿ ಇರುತ್ತದೆ ಎಂಬ ಮಾತಿದೆ. ಜೊತೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶ ಇರುತ್ತದೆ. ಇದರಿಂದಾಗಿ ಬಹುಸಂಖ್ಯಾತರಿಗೆ ಪರೀಕ್ಷೆಯು ಕಬ್ಬಿಣದ ಕಡಲೆಯಂತೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಈ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲೂ ಬರೆಯಲು ಅವಕಾಶ ನೀಡುವಂತೆ ಮಾಡುವಲ್ಲಿ ರಾಜ್ಯದ ಎಲ್ಲ ಸಂಸದರೂ ಸರ್ವ ಪ್ರಯತ್ನ ಮಾಡಬೇಕು. ಅವಕಾಶಗಳಿಗೆ ಭಾಷೆಯಿಂದ ತೊಡಕಾಗಬಾರದು.

- ವಿನಯ್ ಕುಮಾರ್ ಚಿಂಚೋಳಿ, ಬಲಶೆಟ್ಟಿಹಾಳ, ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT