ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿದ್ದೇ ಕಾನೂನು; ಮಾಡಿದ್ದೇ ಜನಹಿತ!

Last Updated 7 ಜುಲೈ 2019, 19:45 IST
ಅಕ್ಷರ ಗಾತ್ರ

ಇಲ್ಲಿಯವರೆಗೂ ದಲಿತರು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗದವರ ಮೇಲೆ ಸಬಲರು ನಡೆಸುವ ಹಲ್ಲೆಗಳು ವರದಿಯಾಗುತ್ತಿದ್ದವು. ಈಗ ಇವುಗಳ ಜೊತೆಗೆ, ಅಸಹಾಯಕ ಜನಸಾಮಾನ್ಯರ ಮೇಲೆ ಅಧಿಕಾರ ಮತ್ತರಾದ ಜನಪ್ರತಿನಿಧಿಗಳು, ಸಂಬಂಧಿಕರು ಮತ್ತು ಅವರ ಬೆಂಬಲಿಗರು ನೈತಿಕತೆಯಿಲ್ಲದೆ, ಕಾನೂನಿನ ಭಯವಿಲ್ಲದೆ ನಡೆಸುವ ದಾಳಿಗಳೂ ಸೇರುತ್ತಿವೆ.

ಜನಸಾಮಾನ್ಯರ ಹಿತಾಸಕ್ತಿಗಳನ್ನು ಸಂವಿಧಾನಬದ್ಧ ವಾಗಿ ಸಾಧಿಸಲೆಂದು ರಚಿತವಾಗುವ ಸರ್ಕಾರದಲ್ಲಿ ಅಧಿಕಾರ ಹಿಡಿದವರೇ ಕಾನೂನು ಭಂಜಕರಾದಾಗ, ಬಲಿಷ್ಠರು ಹೇಳಿದ್ದೇ ಕಾನೂನು, ಮಾಡಿದ್ದೇ ‘ಜನಹಿತ ಕಾರ್ಯ’ ಎಂಬಂತೆ ಆಗುತ್ತದೆ. ನೆಲದ ಕಾನೂನಿಗೆ ನಿಷ್ಠವಾಗಿ ಇರಬೇಕಾದ ವ್ಯವಸ್ಥೆಯು ಕಾನೂನುಭಂಜಕರಿಗೆ ಅನುಕೂಲಕರವಾಗಿ ವರ್ತಿಸತೊಡಗಿದಾಗ, ಜನ
ಸಾಮಾನ್ಯರನ್ನು ಕೇಳುವವರಾರು?

ವಿ.ಎನ್.ಲಕ್ಷ್ಮೀನಾರಾಯಣ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT