ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಹೀಗೆ ಮಾಡಿ... ಮೀಸಲಾತಿ ಕೂಗು ನಿಲ್ಲಬಹುದು

Last Updated 17 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಪ್ರಬಲ ಜಾತಿಯ ಮುಖಂಡರು ತಾವು ಪ್ರತಿನಿಧಿಸುವ ಜಾತಿಯ ಬಡವರ ಜೊತೆ ಸಂಪತ್ತಿನ ಹಂಚಿಕೆಗಾಗಿ ಆಗ್ರಹಿಸಬೇಕು ಎಂದು ಎಚ್.ಕೆ ಶರತ್ ಅವರು ಹೇಳಿರುವುದು (ಸಂಗತ, ಮಾರ್ಚ್‌ 17) ಉತ್ತಮ ಚಿಂತನೆ. ಆದರೆ ವರ್ತಮಾನದ ಸಂಗತಿಗಳು ಇದಕ್ಕೆ ವಿರುದ್ಧವಾಗಿವೆ. ಬಡವರಿಗೆ ಮೀಸಲಾದ ಅನೇಕ ಸವಲತ್ತುಗಳು ಸಿರಿವಂತರ ಪಾಲಾಗುತ್ತಿರುವುದು ನಮ್ಮೆದುರಿಗೆ ನಿಚ್ಚಳವಾಗಿ ಗೋಚರವಾಗುತ್ತಿದೆ.

ಐಷಾರಾಮಿ ಕಾರುಗಳಲ್ಲಿ ತಿರುಗಾಡುವವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಬಡವರಿಗೆಂದೇ ಮೀಸಲಾದ ಪಡಿತರ ಪದಾರ್ಥಗಳನ್ನು ಯಾವುದೇ ಸಂಕೋಚವಿಲ್ಲದೆ ಸಿರಿವಂತರೂ ಬಳಕೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆಂದು ಜಾರಿಯಾದ ಅನೇಕ ಸಬ್ಸಿಡಿಗಳು ಮತ್ತು ಸ್ಕೀಮುಗಳನ್ನು ಭೇದಭಾವವಿಲ್ಲದೆ ಸರ್ವರೂ ಅನುಭವಿಸುತ್ತಿದ್ದಾರೆ. ಖೊಟ್ಟಿ ಮೀಸಲಾತಿ ದಾಖಲೆಗಳನ್ನು ನೀಡಿ ಶೈಕ್ಷಣಿಕ ಸವಲತ್ತು ಮತ್ತು ಸರ್ಕಾರಿ ಹುದ್ದೆಗಳನ್ನು, ಉಳ್ಳವರಲ್ಲಿ ಕೆಲವರು ಕಬಳಿಸುತ್ತಿದ್ದಾರೆ. ಇವು ಹೀಗೇ ಮುಂದುವರಿದರೆ ಬಡವರು ಬಡವರಾಗೇ ಇರುತ್ತಾರೆ ಮತ್ತು ಸಿರಿವಂತರು ಮತ್ತಷ್ಟು ಪ್ರಬಲರಾಗುತ್ತಾರೆ.

ಈ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಮತ್ತು ಸಿರಿವಂತರ ಮನಸ್ಸುಗಳಲ್ಲಿ ತಾವು ಅರ್ಹರಲ್ಲದ ಸೌಲಭ್ಯಗಳನ್ನು ಬಳಸದೇ ಇರುವಂತಹ ನೈತಿಕತೆಯನ್ನು ತುಂಬಬೇಕು. ಇದರಿಂದ ನಿಜವಾಗಿ ಕೆಳಸ್ತರದ ಜನರ ಅಭಿವೃದ್ಧಿಯಾಗಿ ಪ್ರಬಲ ಜಾತಿಯವರ ಮೀಸಲಾತಿಯ ಕೂಗು ನಿಲ್ಲಬಹುದು.

-ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT