ಮೊಬೈಲ್‌ ಬಿಡಿ!

6

ಮೊಬೈಲ್‌ ಬಿಡಿ!

Published:
Updated:

ವಿಧಾನಸಭೆಯ ಕಲಾಪಗಳು ನಡೆಯುತ್ತಿರುವಾಗ ಕೆಲವು ಶಾಸಕರು ಮೊಬೈಲ್‌ ಬಳಸುವುದು ಸಾಮಾನ್ಯ ಎಂಬಂತಾಗಿದೆ. ಹಿಂದೊಮ್ಮೆ ಮೊಬೈಲ್‌ ಬಳಸಿದ ಕೆಲವು ಶಾಸಕರು ಮತ್ತು ಸಚಿವರು ಮುಜುಗರಕ್ಕೆ ಒಳಗಾದದ್ದನ್ನು ಜನರು ಮರೆತಿಲ್ಲ. ‘ವಿಧಾನಸಭೆಯಲ್ಲಿ ಮೊಬೈಲ್ ಬಳಸಬೇಡಿ’ ಎಂದು ಸ್ಪೀಕರ್‌ ಈಚೆಗೆ ಸೂಚನೆ ಕೊಟ್ಟಿದ್ದರೂ ಅದನ್ನು ಶಾಸಕರು, ಸಚಿವರು ಪಾಲಿಸಿದಂತಿಲ್ಲ.

ಸದನದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿರುವಾಗ ಮೊಬೈಲ್‌ನಲ್ಲಿ ಲೀನವಾಗುವುದು ಎಷ್ಟು ಸರಿ? ಉಭಯ ಸದನಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಒಳಿತು.

-ಪ್ರತಿಭಾ ಹಿರೇಮಠ, ತಾಳಿಕೋಟೆ

 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !