ಶನಿವಾರ, ನವೆಂಬರ್ 23, 2019
23 °C

ಉಪನ್ಯಾಸಕ್ಕೆ ವಿರೋಧ ಅನಗತ್ಯ

Published:
Updated:

ಸಿಪಿಐ ಯುವ ಮುಖಂಡ ಕನ್ಹಯ್ಯ ಕುಮಾರ್‌ ಅವರ, ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿನ ಉಪನ್ಯಾಸ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದುದು ಸರಿಯಲ್ಲ. ಏಕೆಂದರೆ, ಉಪನ್ಯಾಸ ನೀಡುವವರು ಬಲಪಂಥೀಯರೇ ಆಗಿರಲಿ ಎಡಪಂಥೀಯರೇ ಆಗಿರಲಿ ತಮ್ಮ ವಿಚಾರವನ್ನು ವ್ಯಕ್ತಪಡಿಸಲು ಭಾರತದ ಸಂವಿಧಾನ ಅವಕಾಶ ಕಲ್ಪಿಸಿದೆ. ಅಷ್ಟಕ್ಕೂ ಕನ್ಹಯ್ಯ ಒಬ್ಬ ಯುವ ಎಡಪಂಥೀಯ ಮುಖಂಡರೇ ವಿನಾ ಭಯೋತ್ಪಾದಕರೋ ಅಥವಾ ನಕ್ಸಲೀಯರೋ ಅಲ್ಲ.

ದೇಶದ ಅನೇಕ ಟಿ.ವಿ. ವಾಹಿನಿಗಳು ಕನ್ಹಯ್ಯ ಅವರನ್ನು ಚರ್ಚೆಗೆ ಆಹ್ವಾನಿಸಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿರುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದು ಪ್ರಜಾಪ್ರಭುತ್ವ ದೇಶ. ಇಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ಮರೆಯಬಾರದು. ಪ್ರತಿಯೊಬ್ಬ ಪ್ರಜೆಯೂ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಸಂವಿಧಾನಬದ್ಧ ಹಕ್ಕನ್ನು ಹೊಂದಿರುತ್ತಾನೆ.

– ಭೀಮಾಶಂಕರ ಹಳಿಸಗರ, ಶಹಾಪುರ

ಪ್ರತಿಕ್ರಿಯಿಸಿ (+)