ಉಪನ್ಯಾಸಕರ ನೇರ ನೇಮಕಾತಿ ಆಗಲಿ

7
ನರಕದ ಕಡೆಗೆ ಪ್ರಯಾಣವೇ?

ಉಪನ್ಯಾಸಕರ ನೇರ ನೇಮಕಾತಿ ಆಗಲಿ

Published:
Updated:

‘ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮಾಸಿಕ ₹ 25,000 ವೇತನ ನೀಡಬೇಕು’ ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರು ಆಗ್ರಹಿಸಿದ್ದು ವರದಿಯಾಗಿದೆ. ಇದಕ್ಕೆ ನಮ್ಮ ಬೆಂಬಲ ಇದೆ. ಆದರೆ ‘ಉಪನ್ಯಾಸಕರ ನೇರ ನೇಮಕಾತಿ ಮಾಡಬಾರದು, ಹಾಗೆ ಮಾಡಿದರೆ 8,000 ಉಪನ್ಯಾಸಕರು ಬೀದಿಗೆ ಬೀಳುತ್ತಾರೆ’ ಎಂಬ ಅವರ ವಾದವು ಹಾಸ್ಯಾಸ್ಪದ. ಅದಕ್ಕಿಂತ 10 ಪಟ್ಟು ಅರ್ಹ ನಿರುದ್ಯೋಗಿಗಳು ನೇರ ನೇಮಕಾತಿಗಾಗಿ ಕಾಯುತ್ತಿದ್ದಾರೆ ಎಂಬುದನ್ನು ಅಧ್ಯಕ್ಷರು ಅರ್ಥ ಮಾಡಿಕೊಳ್ಳಬೇಕು. ಈ ಒತ್ತಾಯಕ್ಕೆ ಬೆಲೆ ಕೊಡದೆ, ಸಂಬಂಧಪಟ್ಟ ಸಚಿವರು ಕೂಡಲೇ ನೇರ ನೇಮಕಾತಿ ನಡೆಸಲು ಅಗತ್ಯ ಕ್ರಮ ಕೈಗೊಂಡು ಲಕ್ಷಾಂತರ ನಿರುದ್ಯೋಗಿಗಳಿಗೆ ನ್ಯಾಯ ಒದಗಿಸಬೇಕು.

ಸಂಧ್ಯಾ ಎಸ್. ಪಾಟೀಲ, ಧಾರವಾಡ

***

ನರಕದ ಕಡೆಗೆ ಪ್ರಯಾಣವೇ?

‘ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಿ’ ಸಂಪಾದಕೀಯವು (ಪ್ರ.ವಾ., ಡಿ. 11) ಸಕಾಲಿಕ. ಬರೀ ಗಾಳಿಯಷ್ಟೇ ಅಲ್ಲ, ಮಾಲಿನ್ಯ ಇನ್ನೂ ಹಲವು ವಿಧಗಳಲ್ಲಿದೆ. ನಗರೋದ್ಯಮದ ಬಾಹುಗಳು ಈಚೆಗೆ ಹಳ್ಳಿಗಳನ್ನು ಕೂಡ ಅರೆ ಪಟ್ಟಣಗಳನ್ನಾಗಿಸುತ್ತಿವೆ. ಹೀಗಾಗಿ ಈಗ ಯಾವ ಹಳ್ಳಿಯಲ್ಲಿಯೂ ಕುಡಿಯಲು ಶುದ್ಧ ನೀರು ಲಭ್ಯವಿಲ್ಲದಾಗಿದೆ. ವಾಹನಗಳಿಗೆ ಕರ್ಕಶ ಹಾರ್ನ್‌ ಅಳವಡಿಸುವುದರಿಂದ ಕಿವುಡುತನವೂ ಉಂಟಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಹಗಲಲ್ಲೂ ಉರಿಯುವ ಲೈಟ್‌ಗಳನ್ನು ಅಳವಡಿಸಿದ್ದರಿಂದ ಎದುರಿನಿಂದ ಬರುವವರು ಹಿಂಸೆ ಅನುಭವಿಸುವಂತಾಗಿದೆ… ಹೀಗೆ ಇಡೀ ವಾತಾವರಣವನ್ನೇ ಅತಿ ವೇಗವಾಗಿ ಮಲಿನಗೊಳಿಸಲಾಗುತ್ತಿದೆ. ಸರ್ಕಾರ ಈ ಯಾವ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ನಾವು ಇಡಿಯಾಗಿ ಯಾವ ದಿಕ್ಕಿನತ್ತ ಈಗ ಹೊರಟಿದ್ದೇವೆ? ನರಕದತ್ತಲೇ ತಾನೇ?’

‌ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !