ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕಬ್ಬು: ವೈಜ್ಞಾನಿಕ ದರ ನಿಗದಿಯಾಗಲಿ

Last Updated 6 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಕಬ್ಬಿನ ದರವು ಗುಜರಾತ್‌, ಉತ್ತರಪ್ರದೇಶ, ಮಹಾರಾಷ್ಟ್ರದಂತಹ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿದೆ. ಅಷ್ಟೇ ಅಲ್ಲ, ಕಾರ್ಖಾನೆಗಳು ರೈತರಿಗೆ ನೀಡುವ ದರದಲ್ಲಿಯೂ ವ್ಯತ್ಯಾಸವಿದೆ. ಸರ್ಕಾರವು ವೈಜ್ಞಾನಿಕವಾಗಿ ಏಕರೂಪದ ದರ ನಿಗದಿಪಡಿಸದೇ ಇರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.

ದೇಶದಾದ್ಯಂತ ರೈತರು ಕಬ್ಬು ಬೆಳೆಯಲು ಖರ್ಚು ಮಾಡುತ್ತಿರುವ ಹಣ ಹೆಚ್ಚುಕಡಿಮೆ ಒಂದೇ ಪ್ರಮಾಣದಲ್ಲಿ ಇದೆ. ಕಬ್ಬಿನಲ್ಲಿನ ಸಕ್ಕರೆಯ ಪ್ರಮಾಣ ಆಧರಿಸಿ ದರ ನಿಗದಿಪಡಿಸುವುದು ವೈಜ್ಞಾನಿಕ ಪದ್ಧತಿಯಾಗುತ್ತದೆ. ಆದರೆ ಹಾಗೆ ಮಾಡದೇ ಇರುವುದು, ಫಲವತ್ತಾದ ಕಬ್ಬು ಬೆಳೆಯುವ ರಾಜ್ಯದ ರೈತರ ಬದುಕನ್ನೇ ಅಸ್ತವ್ಯಸ್ತಗೊಳಿಸುತ್ತಿದೆ. ಕರ್ನಾಟಕದವರೇ ಆದ ಕೇಂದ್ರ ಕೃಷಿ ಮತ್ತು‌ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯದ ರೈತರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸರಿಪಡಿಸಬೇಕಿದೆ. ಈಗಾಗಲೇ ಕಬ್ಬು ಕಟಾವು ಆರಂಭವಾಗಿದೆ. ಈ ವರ್ಷವಾದರೂ ರೈತರಿಗೆ ನ್ಯಾಯ ದೊರೆಯುವಂತಾಗಲಿ.

–ಶರಣಬಸವ ಆರ್. ಪತ್ತಾರ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT