ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಪಠ್ಯಕ್ರಮ ಭರವಸೆಯ ಬೆಳಕಾಗಲಿ

Last Updated 24 ಜೂನ್ 2020, 18:45 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣದಲ್ಲಿ ಮಾದರಿ ಪಠ್ಯಕ್ರಮ ರೂಪಿಸುವ ಸಂಬಂಧದ ಚರ್ಚೆ ಮುನ್ನೆಲೆಗೆ ಬಂದಿರುವುದು ಸಂತಸದ ವಿಷಯ. ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟ ವಿಶ್ವವಿದ್ಯಾಲಯಗಳು ನೀಡುತ್ತಿರುವ ಬಹಳಷ್ಟು ಪದವಿಗಳು, ಕೇವಲ ಪದವಿ ಪಡೆಯಲು ಅರ್ಹವಾಗುತ್ತಿವೆ. ಮಾನವಿಕ ವಿಭಾಗದ ಎಷ್ಟೋ ಪದವಿಗಳು ಜೀವನೋಪಾಯಕ್ಕೆ ಅಡಿಪಾಯ ಹಾಕುತ್ತಿಲ್ಲ. ಸ್ಪರ್ಧಾ ಯುಗದಲ್ಲಿ ಉದ್ಯೋಗ ಸಾಮರ್ಥ್ಯ ನೀಡುವ ಶಕ್ತಿಯು ಮಾದರಿ ಪಠ್ಯಕ್ರಮದಲ್ಲಿ ಅಡಕವಾಗಲಿ ಎಂಬುದು ನಿರುದ್ಯೋಗಿಗಳು ಅಥವಾ ಪದವೀಧರರ ಬೇಡಿಕೆಯಾಗಿದೆ. ‌

ದೇಶವು ಸ್ವಾತಂತ್ರ್ಯ ಪಡೆದು 70 ವರ್ಷಗಳಾದರೂ ಆ ಭರವಸೆಯು ನಮ್ಮ ವಿಶ್ವವಿದ್ಯಾಲಯಗಳ ಪಠ್ಯಕ್ರಮದಿಂದ ನಮಗೆ ಸಿಗುತ್ತಿಲ್ಲ. ಮಾನವಿಕ ಹಾಗೂ ಇತರ ವಿದ್ಯಾಸಕ್ತರು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಮಾದರಿ ಪಠ್ಯಕ್ರಮವನ್ನು ವಿಷಯ ತಜ್ಞರು ರೂಪಿಸಲಿ. ಆ ಮೂಲಕ ಪದವಿಗಳು ಉದ್ಯೋಗ ಭರವಸೆಯ ಬೆಳಕಾಗಲಿ. ಬಾಧಕಗಳನ್ನು ಮೊದಲೇ ಚರ್ಚಿಸಿ ಸಾಧಕಗಳ ಬಗ್ಗೆ ವಿವೇಚನೆ ಮಾಡಲಿ. ಈ ಮೂಲಕ ನಮ್ಮ ವಿಶ್ವವಿದ್ಯಾಲಯಗಳು ವಿಶ್ವದ ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಆಗಲಿ.

-ಡಾ. ಬಿ.ಪಿ.ಕುಮಾರ್,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT