ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಪುನರಾರಂಭ ಆಗಲಿ

Last Updated 2 ಫೆಬ್ರುವರಿ 2021, 20:51 IST
ಅಕ್ಷರ ಗಾತ್ರ

ಗುಮ್ಮಟನಗರಿಯಿಂದ ಕರಾವಳಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವಿಜಯಪುರ- ಮಂಗಳೂರು ಮಾರ್ಗದ ರೈಲನ್ನು 2019ರ ನವೆಂಬರ್‌ನಲ್ಲಿ ಪ್ರಾರಂಭಿಸಲಾಗಿತ್ತು. ಉತ್ತರ ಕರ್ನಾಟಕದ ಜನ ತಮ್ಮ ಜೀವನೋಪಾಯಕ್ಕೆ, ಮಕ್ಕಳ ಶಿಕ್ಷಣಕ್ಕೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಕರಾವಳಿ ಹಾಗೂ ಮಧ್ಯ ಕರ್ನಾಟಕದ ಭಾಗಕ್ಕೆ ತೆರಳಲು ಈ ರೈಲನ್ನು ಅವಲಂಬಿಸಿದ್ದರು.

ರೈಲು ಉತ್ತಮ ಆದಾಯವನ್ನೂ ಹೊಂದಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಅದು ಸ್ಥಗಿತಗೊಂಡಿದೆ. ವಿಜಯಪುರದಿಂದ ಮಂಗಳೂರಿನ ಬಸ್ ಪ್ರಯಾಣಕ್ಕೆ ₹ 800ರಿಂದ ₹ 1,200 ದರವಿದೆ. ಇದು ಬಡವರ ಪಾಲಿಗೆ ಹೊರೆಯಾಗಿದ್ದು ಪರ್ಯಾಯ ಮಾರ್ಗವಾಗಿ ರೈಲು ಪ್ರಯಾಣ
ಸಹಕಾರಿಯಾಗಿತ್ತು.

ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿಯವರ ಪ್ರಯತ್ನದಿಂದ ಈ ರೈಲು ಪ್ರಾರಂಭಗೊಂಡಿತ್ತು. ಈಗ ಲಾಕ್‌ಡೌನ್ ಬಹುತೇಕ ತೆರವಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ರೈಲುಗಳು ಪುನರಾರಂಭವಾಗಿವೆ. ಆದರೆ ಈ ರೈಲು ಮಾತ್ರ ಇನ್ನೂ ಪ್ರಾರಂಭಗೊಂಡಿಲ್ಲ. ಕೂಡಲೇ ಈ ರೈಲಿಗೆ ಪುನರ್‌ಚಾಲನೆ ನೀಡುವ ಮೂಲಕ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜನರಿಗೆ ಅನುಕೂಲ ಕಲ್ಪಿಸಬೇಕು.

ಪ್ರಶಾಂತ ಹೊಸಮನಿ,ನಾಗಠಾಣ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT