ಗುರುವಾರ , ಜುಲೈ 29, 2021
21 °C

ಅವಸರದ ತೀರ್ಮಾನ: ಅಂದೂ ಇಂದೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅನಗತ್ಯ ಅವಸರದ ಕಾರಣದಿಂದ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ’ ಎಂದು  ಐದು ದಶಕಗಳ ಹಿಂದೆ ಕೇಂದ್ರದ ಅಂದಿನ ಶಿಕ್ಷಣ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಹೇಳಿದ್ದರು (ಪ್ರ.ವಾ., 50 ವರ್ಷಗಳ ಹಿಂದೆ, ಜೂನ್‌ 3). ಈ  ಹೇಳಿಕೆ ಇಂದಿಗೂ ಪ್ರಸ್ತುತವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಗಳಾಗಿದ್ದರೂ ಹಲವಾರು ವಿಷಯಗಳಲ್ಲಿ ನಾವು ಎಡವುತ್ತಿರುವುದು ಅವಸರದ ತೀರ್ಮಾನಗಳ ಕಾರಣಕ್ಕೇ. ಮುಂದಾಲೋಚನೆ ಇಲ್ಲದೆ ತೆಗೆದುಕೊಂಡ ಎಷ್ಟೋ ತೀರ್ಮಾನಗಳು ಶಿಕ್ಷಣ ಗುಣಮಟ್ಟದ ಸುಧಾರಣೆಗೆ ಅಂಕುಶ ಹಾಕಿದಂತಾಗುತ್ತವೆ.

ಪ್ರಸ್ತುತ ರಾಜ್ಯದಲ್ಲಿ ಶಾಲೆಗಳ ಪುನರಾರಂಭದ ಬಗ್ಗೆಯೂ ಸರ್ಕಾರ ಯಾವುದೇ ಅವಸರದ ತೀರ್ಮಾನ ಕೈಗೊಳ್ಳದೆ, ಮಕ್ಕಳ ಆರೋಗ್ಯ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟು ಸೂಕ್ತ ನಿರ್ಧಾರ ಕೈಗೊಳ್ಳಬೇಕು.

–ಕಡೂರು ಫಣಿಶಂಕರ್, ಬೆಂಗಳೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು