ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಅವ್ಯವಹಾರ: ಗ್ರಾಹಕರಲ್ಲಿ ಮೂಡದ ವಿಶ್ವಾಸ

Last Updated 28 ಮಾರ್ಚ್ 2022, 21:09 IST
ಅಕ್ಷರ ಗಾತ್ರ

ಗುರು ರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ಇದುವರೆಗೆ ₹ 2,317 ಕೋಟಿ ದುರ್ಬಳಕೆಯಾಗಿದ್ದು, 2018-19ನೇ ಸಾಲಿನ ಲೆಕ್ಕ ಪರಿಶೋಧನೆ ಬಾಕಿ ಉಳಿದಿದೆಯೆಂದು, ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಸಹಕಾರ ಸಚಿವರು ಉತ್ತರಿಸಿದ್ದಾರೆ. 2014-15ನೇ ಸಾಲಿನಲ್ಲಿ ಪ್ರಾರಂಭವಾಗುವ ಹಣದ ದುರ್ಬಳಕೆ 2017-18ನೇ ಸಾಲಿನವರೆಗೂ ಅವ್ಯಾಹತವಾಗಿ ಮುಂದುವರಿದರೂ, ಅದು ಸಂಬಂಧಿಸಿದ ಇಲಾಖೆಗಳ ಗಮನಕ್ಕೇ ಬಂದಿಲ್ಲವೆಂದರೆ ಚೋದ್ಯವೆನಿಸುತ್ತದೆ.

2014-15ನೇ ಸಾಲಿನಲ್ಲಿ ಹಣ ದುರ್ಬಳಕೆಯಾದಾಗಲೇ ಸಹಕಾರ ಇಲಾಖೆಯ ನಿಬಂಧಕರು ಮತ್ತು ಸಹಕಾರ ಇಲಾಖೆಯ ಆಡಿಟ್ ನಿರ್ದೇಶಕರು ನಿದ್ರೆಯಿಂದ ಎದ್ದು ತಮ್ಮ ಕರ್ತವ್ಯ ನಿರ್ವಹಿಸಿದ್ದರೆ 2017-18ರವರೆಗೂ ಆ ಬ್ಯಾಂಕಿನಲ್ಲಿ ನಿರಾತಂಕವಾಗಿ ನಡೆದಿರುವ ಹಣದ ದುರ್ಬಳಕೆಯನ್ನು ಖಂಡಿತ ತಪ್ಪಿಸಬಹುದಿತ್ತು. ಗುರು ರಾಘವೇಂದ್ರ ಸಹಕಾರ ಬ್ಯಾಂಕಿನಂತೆಯೇ, ಋಷಿ-ಮುನಿಗಳ ಹೆಸರಿನಲ್ಲಿಯೇ ಸ್ಥಾಪಿತವಾಗಿರುವ ಇನ್ನೂ ಒಂದೆರಡು ಸಹಕಾರ ಬ್ಯಾಂಕ್‌ಗಳೂ ಸಂಬಂಧಿಸಿದ ಇಲಾಖೆಗಳ ‘ಸಹಕಾರ’ ಇಲ್ಲದೆ ಗ್ರಾಹಕರಿಗೆ ಇಷ್ಟು ಲೀಲಾಜಾಲವಾಗಿ ಉಂಡೆನಾಮ ತೀಡಲು ಸಾಧ್ಯವಾಗುತ್ತಿರಲಿಲ್ಲವೆಂದು ಇದರಿಂದ ವೇದ್ಯವಾಗುತ್ತದೆ.

ತಿಪ್ಪೂರು ಪುಟ್ಟೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT