ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಇದು ಯಾವ ಬಗೆಯ ಲೆಕ್ಕಾಚಾರ?

Last Updated 29 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‍ಗಳಲ್ಲಿ, 23.8 ಕಿ.ಮೀ. ದೂರ ಇರುವ ರಾಣೆಬೆನ್ನೂರು- ಹರಿಹರ ಮಾರ್ಗಕ್ಕೆ ₹ 45 ಮತ್ತು 33.6 ಕಿ.ಮೀ. ಇರುವ ರಾಣೆಬೆನ್ನೂರು- ಹಾವೇರಿ ಮಾರ್ಗಕ್ಕೆ ₹ 40 ಪ್ರಯಾಣ ದರವನ್ನು ನಿಗದಿಗೊಳಿಸಲಾಗಿದೆ. ಇದನ್ನು ಯಾವ ರೀತಿ ಲೆಕ್ಕ ಹಾಕಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಹರಿಹರ- ರಾಣೆಬೆನ್ನೂರು ಮಧ್ಯೆ ಟೋಲ್ ಇದೆ, ಹಾವೇರಿಗೆ ಇಲ್ಲ! ಪ್ರತೀ ಪ್ರಯಾಣಿಕನಿಗೆ ಅಂದಾಜು ₹ 10 ಟೋಲ್ ಶುಲ್ಕ ಆಕರಿಸಿದರೂ ಅತಿ ಗರಿಷ್ಠ ₹ 40 ನಿಗದಿಗೊಳಿಸಬೇಕು. ಆದರೂ ಈ ತೆರನಾದ ಲೆಕ್ಕಾಚಾರವನ್ನು 20 ವರ್ಷಗಳಿಂದಲೂ ಮಾಡಿಕೊಂಡು ಬರಲಾಗಿದೆ. ತತ್ಪರಿಣಾಮವಾಗಿ, ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸುತ್ತಾರೆ. ಅದು ರಾಜ್ಯ ಸಾರಿಗೆ ನಿಗಮಗಳಿಗೆ ನಷ್ಟಕ್ಕೆ ಕಾರಣವಾಗುತ್ತದೆ. ಈಗಲಾದರೂ ಸಂಬಂಧಿತ ಅಧಿಕಾರಿಗಳು ಸರಿಪಡಿಸುವರೇ?

- ಡಾ. ಚನ್ನು ಅ. ಹಿರೇಮಠ,ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT