ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಒಳಗೊಳ್ಳುವಿಕೆಯೇ ಜೀವಂತ ಭಾಷೆಯ ಲಕ್ಷಣ

Last Updated 29 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಶುದ್ಧ ಕನ್ನಡಕ್ಕೆ ಸಂಬಂಧಿಸಿದಂತೆ ಅಬ್ದುಲ್‌ ರೆಹಮಾನ್ ಪಾಷ ಅವರ ಲೇಖನ (ಸಂಗತ, ಡಿ. 10) ಉತ್ತಮವಾಗಿ ಮೂಡಿಬಂದಿದೆ. ಕನ್ನಡ ಭಾಷೆಯು ಹಲವು ಭಾಷೆಗಳಲ್ಲಿನ ಕೆಲ ಶಬ್ದಗಳನ್ನು ಸ್ವೀಕರಿಸಿ ಶ್ರೀಮಂತವಾಗಿದೆ. ಸಂಸ್ಕೃತ ಶಬ್ದಗಳನ್ನು ಬಳಸದೇ ಕಾವ್ಯ ರಚಿಸಿದ ಕೀರ್ತಿಯು ಆಂಡಯ್ಯನಿಗೆ ಲಭಿಸಿತ್ತು. ಎಲ್ಲರೂ ಆಂಡಯ್ಯನಂತೆ ಆಗಲು ಸಾಧ್ಯವಿಲ್ಲ. ಈಗಿನ ಆಡಳಿತಾತ್ಮಕ ಕನ್ನಡದಲ್ಲಿ ತಹಶೀಲ್ದಾರ್‌, ಸರ್ಕಾರ, ಪೊಲೀಸ್‌, ಬಸ್‌ಸ್ಟ್ಯಾಂಡ್‌, ಮೋಟರ್‌ ಮುಂತಾದವುಗಳನ್ನು ನಮ್ಮದಾಗಿ ಸ್ವೀಕರಿಸಿದ್ದೇವೆ. ಒಳಗೊಳ್ಳುವುದೇ ಜೀವಂತ ಭಾಷೆಯ ಲಕ್ಷಣ.

- ಸಂಗಪ್ಪ ಎನ್‌. ಗಾಣಿಗೇರ,ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT