ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಮಾರ್ಗ ತೋರಲಿ, ಘನತೆ ಉಳಿಯಲಿ

Last Updated 22 ಜುಲೈ 2021, 19:30 IST
ಅಕ್ಷರ ಗಾತ್ರ

ರಾಜ್ಯದ ರಾಜಕೀಯ ಬೆಳವಣಿಗೆಯಲ್ಲಿ ಮಠಾಧೀಶರು ಕೈ ಜೋಡಿಸಿರುವುದು ನಾಡಿನ ದುರಂತವೇ ಸರಿ. ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಇಳಿಸಬಾರದು ಎಂದು ಐವತ್ತಕ್ಕೂ ಹೆಚ್ಚು ಮಠಾಧೀಶರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಇದೇ ಮಠಾಧೀಶರು, ಜನಸಾಮಾನ್ಯರಿಗೆ ಆಗುತ್ತಿರುವ ನೂರಾರು ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಎಂದು ಯಾವತ್ತೂ ಈ ಪರಿಯಾಗಿ ಒಗ್ಗಟ್ಟು ಪ್ರದರ್ಶಿಸಿರಲಿಲ್ಲ!

ಒಂದು ಮಠದ ಪೀಠಾಧಿಪತಿಯಾಗಿ ಮಠಾಧೀಶರು ಜಾತಿಭೇದ ಮರೆತು, ಮಠಗಳಿಗೆ ಬರುವ ಲಕ್ಷಾಂತರ ಜನರಿಗೆ ಸನ್ಮಾರ್ಗವನ್ನು ತೋರಿಸಬೇಕಾಗುತ್ತದೆ. ಅಂತಹವರು ವ್ಯಕ್ತಿಯೊಬ್ಬರ ಪರವಾಗಿ ಬಹಿರಂಗವಾಗಿ ಹೇಳಿಕೆ ನೀಡಿ, ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಸನ್ಮಾರ್ಗವನ್ನು ತೋರಬೇಕಾದ ಗುರುಗಳು ಇನ್ನಾದರೂ ರಾಜಕಾರಣದ ಉಸಾಬರಿ ಬಿಟ್ಟು, ಸಮಾಜದಲ್ಲಿನ ಕೊಳಕುಗಳನ್ನು ತೊಲಗಿಸುವ ಕೆಲಸದಲ್ಲಿ ತೊಡಗಲಿ. ಆ ಮೂಲಕ ಘನತೆ ಉಳಿಸಿಕೊಳ್ಳಲಿ.

ರಾಜು ಬಿ. ಲಕ್ಕಂಪುರ,ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT