ಶನಿವಾರ, ಮೇ 21, 2022
28 °C

ವಾಚಕರ ವಾಣಿ| ಸೋಂಕು ಹರಡಲು ಸರ್ಕಾರದ ರತ್ನಗಂಬಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾತ್ರಿ ಕರ್ಫ್ಯೂ, ಹಗಲು ರ‍್ಯಾಲಿ ಯಾಕೆ’ ಎಂಬ ಸಂಸದ ವರುಣ್ ಗಾಂಧಿ ಅವರ ಪ್ರಶ್ನೆ (ಪ್ರ.ವಾ., ಡಿ. 28) ಸರ್ವಸಮ್ಮತವಾದದ್ದು. ಹಗಲಿನಲ್ಲಿ ಆಡಳಿತಾರೂಢ ಪಕ್ಷಗಳೇ ಚುನಾವಣಾ ರ‍್ಯಾಲಿಗಳನ್ನು ಆಯೋಜಿಸುತ್ತಿವೆ. ಇದರಿಂದ ಜನಸಂದಣಿ ಉಂಟಾಗಿ, ಸೋಂಕು ಹರಡಲು ಸರ್ಕಾರವೇ ರತ್ನಗಂಬಳಿ‌ ಹಾಸಿಕೊಟ್ಟಂತೆ ಆಗುವುದಿಲ್ಲವೇ?

ಹೆಚ್ಚಿನ ಕೆಲಸ ಕಾರ್ಯಗಳನ್ನು ಆನ್‌ಲೈನ್ ಮೂಲಕವೇ ಮಾಡುವಂತೆ ಶಿಕ್ಷಣ ಸಂಸ್ಥೆಗಳು, ಐ.ಟಿ., ಬಿ.ಟಿ. ಕಂಪನಿಗಳಿಗೆ ಸರ್ಕಾರ ಒತ್ತಡ ಹೇರುತ್ತಿರುವಾಗ, ಚುನಾವಣಾ ಪ್ರಚಾರದ ರ‍್ಯಾಲಿಗಳನ್ನೂ ಹೀಗೇ ಯಾಕೆ ಮಾಡ ಬಾರದು? ನಿಮ್ಮ ಸಾಧನೆಗಳನ್ನು ಅಬ್ಬರದ ಪ್ರಚಾರದ ಮೂಲಕವೇ ಏಕೆ ಮಾಡಬೇಕು? ಮನ್ ಕಿ ಬಾತ್, ಕೋವಿಡ್ ಸಂದೇಶಗಳು, ಸಭೆಗಳು, ಲಾಕ್‌ಡೌನ್‌ಗೆ ಸಂಬಂಧಿಸಿದ ಬ್ರೇಕಿಂಗ್ ಸುದ್ದಿಗಳನ್ನು ಆನ್‌ಲೈನ್ ಮೂಲಕವೇ ಇಡೀ ದೇಶಕ್ಕೆ ತಲುಪಿಸಿರುವಾಗ, ಆಯಾ ರಾಜ್ಯದ ಚುನಾವಣಾ ಪ್ರಚಾರವನ್ನೂ ಆನ್‌ಲೈನ್‌ ಮೂಲಕವೇ ಮಾಡುವಂತೆ ಆಗಬೇಕು. ಇದರಿಂದ ದೇಶಕ್ಕೂ ಕ್ಷೇಮ ಮತ್ತು ಹಣ ಉಳಿತಾಯ.

ಅಶ್ವತ್ಥ ಕಲ್ಲೇದೇವರಹಳ್ಳಿ, ಕುಂಕಾನಾಡು, ಕಡೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.