ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಭ್ರಷ್ಟಾಚಾರ: ಆಡಳಿತ ಪಕ್ಷ ಹೊರತಾಗಿದೆಯೇ?

Last Updated 22 ಜೂನ್ 2022, 19:31 IST
ಅಕ್ಷರ ಗಾತ್ರ

ವಿವಿಧ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಡಿ.ಕೆ.ಶಿವಕುಮಾರ್‌ ಮುಂತಾದವರನ್ನು ವಿಚಾರಣೆಗೆ ಒಳಪಡಿಸುವ ಬಗ್ಗೆ ದೇಶದಲ್ಲಿ ಭ್ರಷ್ಟಾಚಾರ ವಿರೋಧಿಗಳ ತಕರಾರು ಖಂಡಿತಾ ಇರುವುದಿಲ್ಲ. ನಿಜವಾಗಿಯೂ ಅವರೆಲ್ಲಾ ಆಯಾ ಪ್ರಕರಣಗಳಲ್ಲಿ ತಪ್ಪಿತಸ್ಥರೇ ಆಗಿದ್ದರೆ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಬಗ್ಗೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ಅದು ಒಪ್ಪುವಂಥದ್ದೂ ಅಲ್ಲ. ಆದರೆ ಪ್ರಶ್ನೆ ಇರುವುದು, ಆಡಳಿತ ಪಕ್ಷಕ್ಕೆ ಸೇರಿದ ಯಾರನ್ನೂ ಮುಟ್ಟದೆ ಬರೀ ವಿರೋಧ ಪಕ್ಷದವರನ್ನೇ ಇ.ಡಿ. ಅವರು ತಮ್ಮ ಗುರಿಯನ್ನಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದರ ಬಗ್ಗೆ. ಹಾಗಾದರೆ ಆಡಳಿತ ಪಕ್ಷದವರು ಇದೆಲ್ಲದರಿಂದ ಹೊರತಾದವರೇ?

ಅವರ ಭ್ರಷ್ಟಾಚಾರ ಪ್ರಕರಣಗಳು ದಿನಾಲೂ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದರೂ ಅವರನ್ನು ಮುಟ್ಟುವ ಧೈರ್ಯ ಇ.ಡಿ.ಗೆ ಏಕಿಲ್ಲ? ಇದರಿಂದ, ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸಬೇಕಾದಇ.ಡಿ.ಯಂಥ ಸಂಸ್ಥೆಗಳು ಕೂಡ ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿವೆ ಎಂಬ ಅನುಮಾನ ಜನಸಾಮಾನ್ಯರಲ್ಲಿ ಬಲಗೊಂಡರೆ ಅಚ್ಚರಿಯೇನಿಲ್ಲ.

- ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT