ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಗಣೇಶ ವಿಸರ್ಜನೆ ಅರ್ಥಪೂರ್ಣವಾಗಿರಲಿ

Last Updated 4 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಎಲ್ಲೆಲ್ಲೂ ಈಗ ಗಣೇಶೋತ್ಸವದ ಸಂಭ್ರಮ. ಅಲ್ಲಲ್ಲಿ ಪುರಾಣ ಪ್ರವಚನ, ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮ, ಕ್ಯಾಸೆಟ್ ಹಾಡುಗಳ ಸುರಿಮಳೆ. ಒಂದು ರೀತಿಯಲ್ಲಿ ಈ ಹಬ್ಬವು ಮನರಂಜನೆಯೊಂದಿಗೆ ಆಧ್ಯಾತ್ಮಿಕ ಅರಿವು ಮೂಡಿಸುವ ಧರ್ಮಸಂಸ್ಕೃತಿಯಾಗಿದೆ. ಈಗ ಅಷ್ಟೇ ಸರಳವಾಗಿ ಗಣೇಶನ ವಿಸರ್ಜನೆಯೂ ಆಗಬೇಕೆಂಬುದು ಕಳಕಳಿ.

ವಿಸರ್ಜನೆ ವೇಳೆ ಶಬ್ದಮಾಲಿನ್ಯಕ್ಕೆ ಅವಕಾಶ ನೀಡುವುದು ಬೇಡ. ಅದರ ದುಷ್ಪರಿಣಾಮಗಳು ಎಲ್ಲರಿಗೂ ತಿಳಿದಿವೆ. ತಿಳಿದೂ ತಪ್ಪು ಎಸಗುವುದು ಬೇಡ. ಕಿವಿಗೆ ಇಂಪು ನೀಡುವ ಭಕ್ತಿಗೀತೆ, ಮಂಗಳವಾದ್ಯಗಳ ಮೂಲಕ ಮೆರವಣಿಗೆ ಸಾಗಿದರೆ ಚೆಂದ. ಇಂತಹ ಆಚರಣೆಯಿಂದ ಹಣದ ಅಪವ್ಯಯ ಆಗದು. ಪರಿಸರಮಾಲಿನ್ಯ, ಶಬ್ದಮಾಲಿನ್ಯ ಇರದು.

- ಜಿ.ಎಸ್.ಸುತಾರ,ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT