ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ಪೊಲೀಸ್‌ ಎಂದರೆ ‘ಭರವಸೆ’...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ನ ಈ ಸಮಯದಲ್ಲಿ ನಮ್ಮ ರಾಜ್ಯದ ಜನ ನಂಬಿರುವುದು, ಆರೋಗ್ಯ ಸಿಬ್ಬಂದಿಯನ್ನು ಬಿಟ್ಟರೆ ಪೊಲೀಸ್‌ ಇಲಾಖೆಯನ್ನು. ಕೆಲವು ದಕ್ಷ, ಪ್ರಾಮಾಣಿಕ ಪೊಲೀಸ್‌ ಅಧಿಕಾರಿಗಳು ಹಗಲಿರುಳೆನ್ನದೇ ಜನರಿಗಾಗಿ, ರಾಜ್ಯಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಕೆಲವು ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಮದ್ಯ ಹಾಗೂ ಸಿಗರೇಟ್ ಕಂಪನಿಗಳೊಂದಿಗೆ ಶಾಮೀಲಾಗಿರುವುದು ನಾಚಿಕೆಗೇಡಿನ ಸಂಗತಿ.

ಪೊಲೀಸ್‌ ಎಂದರೆ ‘ಭಯವಲ್ಲ, ಭರವಸೆ’ ಎಂಬ ಮಾತಿಗೆ ಅನ್ವರ್ಥವಾಗಿ ನಡೆದುಕೊಂಡ ದಕ್ಷ ಅಧಿಕಾರಿಗಳು ನಮ್ಮಲ್ಲಿ ಇದ್ದರು. ಈಗಲೂ ಇದ್ದಾರೆ. ಇಂತಹವರ ಹೆಸರು ಕೇಳಿದರೆ ಪೊಲೀಸ್‌ ಇಲಾಖೆಯ ಮೇಲೆ ಗೌರವ ಹೆಚ್ಚಾಗುತ್ತದೆ. ಆಡಳಿತಕ್ಕೆ ಹೊಸದಾಗಿ ಸೇರುವ ಅಧಿಕಾರಿಗಳಿಗೆ ಇಂಥವರು ಸ್ಫೂರ್ತಿ. ‘ಬೇಲಿಯೇ ಎದ್ದು ಹೊಲ ಮೇಯುವ’ ಹಾಗೆ ಕೆಲವು ಅಧಿಕಾರಿಗಳು ಇಲಾಖೆಯ ಮೇಲೆ ಭ್ರಷ್ಟತೆಯ ಕಳಂಕ ಹೊರಿಸುತ್ತಿದ್ದಾರೆ. ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಆಯಕಟ್ಟಿನ ಜಾಗಗಳಿಗೆ ದಕ್ಷ ಅಧಿಕಾರಿಗಳನ್ನು  ನಿಯೋಜಿಸಬೇಕು.

ನವೀನ್ ಕೊಡವತ್ತಿ, ಹುಲಿಯೂರುದುರ್ಗ, ಕುಣಿಗಲ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು