ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಒಂಟಿತನದ ಕಷ್ಟ ಅರಿವಾಗಲಿ

Last Updated 13 ಮೇ 2020, 19:30 IST
ಅಕ್ಷರ ಗಾತ್ರ

ಲಾಕ್‌ಡೌನ್‌ನಿಂದ ಒಂದೂವರೆ ತಿಂಗಳು ಮನೆಗಳಲ್ಲಿ ಬಂದಿಯಾಗಿದ್ದಕ್ಕೆ ಬಹುತೇಕರಿಗೆ ಮಾನಸಿಕ ಹಿಂಸೆಯ ಅನುಭವವಾಗಿದೆ. ನಮಗೆ ಬೇಸರ ಕಳೆಯಲು ಮೊಬೈಲ್, ಟಿ.ವಿ. ಇನ್ನಿತರ ಆಧುನಿಕ ಸಾಧನಗಳಿವೆ, ಕುಟುಂಬದ ಎಲ್ಲ ಸದಸ್ಯರು ನಮ್ಮ ಜೊತೆಗಿದ್ದಾರೆ. ಬೇಕಾದರೆ ಮೊಬೈಲ್‌ನಲ್ಲಿ ಸ್ನೇಹಿತರ ಜೊತೆಹರಟೆ ಹೊಡೆಯಬಹುದು. ಇಷ್ಟೆಲ್ಲ ಅನುಕೂಲಗಳಿದ್ದರೂ ನಮ್ಮನ್ನು ಒಂಟಿತನ ಕಾಡುತ್ತದೆ. ಆದರೆ ಇದ್ಯಾವುದೂ ಇಲ್ಲದೆ ಜೈಲುಗಳಲ್ಲಿ ಬಂದಿಯಾಗಿರುವ ಕೈದಿಗಳ ಸ್ಥಿತಿಯನ್ನು ಒಮ್ಮೆ ನೆನಪಿಸಿಕೊಳ್ಳಿ! ವರ್ಷಾನುಗಟ್ಟಲೆ ಜೈಲಿನಲ್ಲಿ ಇರುವವರ ಮಾನಸಿಕ ವೇದನೆ ಎಷ್ಟಿರಬಹುದು ಎಂಬುದು ತಿಳಿಯುತ್ತದೆ.

ಈ ಅನುಭವವು ಕಾನೂನು ಸುವ್ಯವಸ್ಥೆ ಪಾಲನೆಗೆ ನಮ್ಮನ್ನು ಪ್ರೇರೇಪಿಸಬೇಕು. ಕಾನೂನುಬಾಹಿರ ಕೃತ್ಯಗಳಿಂದ ದೂರವಿರಲು ನಮಗೆ ನೆರವಾಗಬೇಕು. ಕೊರೊನಾ ನಮಗೆ ಹಲವಾರು ಪಾಠಗಳನ್ನು ಕಲಿಸಿದೆ. ಅದರಲ್ಲಿ ಇದು ಕೂಡ ಒಂದು ಆಗಲಿ!

– ರಾಜು ಬಿ. ಲಕ್ಕಂಪುರ,ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT