ಸೋಮವಾರ, ಸೆಪ್ಟೆಂಬರ್ 27, 2021
22 °C

ವಾಚಕರವಾಣಿ| ಸಮಾಧಿ ನಿರ್ಮಾಣ: ಇರಲಿ ಗಟ್ಟಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾಧಿ ನಿರ್ಮಾಣದ ವಿಚಾರದಲ್ಲಿ ‘ಸ್ಮಶಾನಸದೃಶ’ ಅಭಿಮಾನವೇಕೆ? ಎಂಬ ಎನ್.ಎಸ್.ಶಂಕರ್ ಅವರ ಅಭಿಪ್ರಾಯ (ಪ್ರ.ವಾ., ಜುಲೈ 17) ಸಮಂಜಸವಾಗಿದೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸರ್ಕಾರವು ಸರ್ಕಾರಿ ಜಾಗದಲ್ಲಿ ಸ್ಮಾರಕಗಳನ್ನು ನಿರ್ಮಿಸುತ್ತಾ ಹೋಗುವುದಾದಲ್ಲಿ ಮುಂದೊಂದು ದಿನ ಕರ್ನಾಟಕದ ಬಹುಮುಖ್ಯ ಸ್ಥಳಗಳೆಲ್ಲಾ ಸ್ಮಶಾನಗಳಾದರೂ ಅಚ್ಚರಿಯಿಲ್ಲ.

ಕುವೆಂಪು ಅವರು ನಿಧನರಾದಾಗ ಅವರ ಭಕ್ತರು ಮಾನಸಗಂಗೋತ್ರಿ ಆವರಣದಲ್ಲಿಯೇ ಸಮಾಧಿ ಮಾಡಬೇಕೆಂದು ಬಯಸಿದ್ದರು. ಆದರೆ ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿ ‘ನಮ್ಮ ತಂದೆಯವರನ್ನು ಇಲ್ಲಿ ಸಮಾಧಿ ಮಾಡಿದರೆ ಮುಂದೆ ನಿಧನರಾಗುವ ಎಲ್ಲ ಕುಲಪತಿಗಳನ್ನೂ ಇಲ್ಲಿಯೇ ಸಮಾಧಿ ಮಾಡಿ, ಮಾನಸ ಗಂಗೋತ್ರಿಯನ್ನು ಸ್ಮಶಾನ ಗಂಗೋತ್ರಿಯನ್ನಾಗಿ ಮಾಡಬೇಕಾಗುತ್ತದೆ’ ಎಂದು ಹೇಳಿ, ಮಹಾಕವಿಯ ಹುಟ್ಟೂರು ಕುಪ್ಪಳಿಯ ಪ್ರಕೃತಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಇದು ಎಲ್ಲರಿಗೂ ಆದರ್ಶವಾಗಬೇಕು. ರಾಜ್ಯ ಸರ್ಕಾರ ಇಂತಹ ವಿಷಯಗಳಲ್ಲಿ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ರಾಜ್ಯದ ಆಯಕಟ್ಟಿನ ಸ್ಥಳಗಳೆಲ್ಲಾ ಸ್ಮಾರಕಗಳಾಗುವುದು ವಿವೇಕವಲ್ಲ.

ಮೋದೂರು ಮಹೇಶಾರಾಧ್ಯ, ಹುಣಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು