ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ಆಂಜನೇಯನ ಶಕ್ತಿ ಅರಿವಾಗಲು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐದು ವರ್ಷದ ಮೊಮ್ಮಗನ ಚಿಕಿತ್ಸೆಗಾಗಿ ಮಹಿಳೆಯೊಬ್ಬರು 130 ಕಿ.ಮೀ. ಸೈಕಲ್ ತುಳಿದು, ಆತನನ್ನು ಆಸ್ಪತ್ರೆಗೆ ಕರೆದೊಯ್ದದ್ದು (ಪ್ರ.ವಾ., ಮೇ 10) ಮನ ಮಿಡಿಯುವಂತಿದೆ. ಮಹಿಳೆಯರನ್ನು ದುರ್ಬಲರು ಎಂದು ಪರಿಗಣಿಸುವ ಜನರಿಗೆ ಇದೊಂದು ಪಾಠ. ಆಂಜನೇಯನ ಶಕ್ತಿ ಅವನಿಗೆ ಅರಿವಾಗಲು ಬೇರೆಯವರ ಸಹಾಯ ಬೇಕಿತ್ತು. ಅದೇ ರೀತಿ, ಸಂದರ್ಭಕ್ಕೆ ಕಟ್ಟುಬಿದ್ದು ಅಷ್ಟೊಂದು ದೂರ ಸೈಕಲ್ ತುಳಿದದ್ದು ಆಕೆಯ ಮಾನಸಿಕ ಸ್ಥಿರತೆ ಹಾಗೂ ದಿಟ್ಟವಾದ ಧ್ಯೇಯವನ್ನು ಸಾಬೀತುಪಡಿಸಿದೆ. ಪ್ರತೀ ಮಹಿಳೆಯೂ ಸಂದರ್ಭಕ್ಕೆ ಸರಿಯಾಗಿ ತನ್ನ ನಿಗೂಢ ಶಕ್ತಿಯನ್ನು ಉಪಯೋಗಿಸಲು ಸಾಧ್ಯವಾದರೆ, ಎಷ್ಟೋ ಕಷ್ಟಗಳಿಂದ ಆಕೆ ಪಾರಾಗಬಹುದೇನೊ.

- ಬಾಲಕೃಷ್ಣ ಎಂ.ಆರ್., ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.