ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಮೀಸಲಾತಿ ಎಂಬ ಕುದುರೆಯನೇರಿ...

Last Updated 29 ನವೆಂಬರ್ 2022, 20:31 IST
ಅಕ್ಷರ ಗಾತ್ರ

ಕೆಲವು ಸ್ವಾಮೀಜಿಗಳು ಮತ್ತು ಸಮುದಾಯಗಳ ಮುಖಂಡರ ಮುಂದಾಳತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳು, ಸಭೆಗಳು, ಮೀಸಲಾತಿ ಹೆಚ್ಚಳಕ್ಕಾಗಿ ಸರ್ಕಾರಕ್ಕೆ ಕೊಡುತ್ತಿರುವ ಗಡುವು ಮತ್ತು ತರಹೇ ವಾರಿ ಪತ್ರಿಕಾಗೋಷ್ಠಿಗಳನ್ನು ನೋಡಿದರೆ, ಇವರೆಲ್ಲ ಬಸವಾದಿ ಶರಣರ ತತ್ವ, ಕನಕದಾಸರ ಕೀರ್ತನೆಯ ಸಾರ, ಶರೀಫರ ಗೀತೆಯ ಅರ್ಥ, ಕಬೀರದಾಸರು, ಗುರುನಾನಕರ ಸಮಾಜ ಸುಧಾರಣೆ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ, ಅವು ತಮಗೆ ಅನ್ವಯವಾಗುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅನಿಸದೇ ಇರದು.

ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ತೊಲಗಿಸಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕಲು ಸಲಹೆ ನೀಡಬೇಕಾದ ಮಹನೀಯರೇ ಇಂದು ನಮ್ಮದು ಆ ಜಾತಿ, ಈ ಜಾತಿ ಎನ್ನುತ್ತ ಮೀಸಲಾತಿ ಎಂಬ ಕುದುರೆಯನ್ನು ಏರ ಹೊರಟಿರುವುದನ್ನು ನೋಡಿದರೆ, ನಾವು ತಂತ್ರಜ್ಞಾನದಲ್ಲಿ ಮುಂದೆ ಹೋಗುತ್ತಿದ್ದೇವೆಯೇ ವಿನಾ ಮಾನವೀಯತೆ, ಸಹೋದರತ್ವದಲ್ಲಿ ನೂರು ವರ್ಷ ಹಿಂದಕ್ಕೆ ಹೋಗುತ್ತಿದ್ದೇವೆ ಅನ್ನಿಸುತ್ತಿದೆ.

-ಬಸನಗೌಡ ಪಾಟೀಲ,ಯರಗುಪ್ಪಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT