ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ನ ಅಪೇಕ್ಷೆಗೆ ಅನುಗುಣವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದು, 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲು ತಿಳಿಸಿರುವುದು, ಈ ಪತ್ರಕ್ಕನುಗುಣವಾಗಿ ರಾಜ್ಯದ ಪಿಯು ಕಾಲೇಜುಗಳಲ್ಲಿ ಕಡ್ಡಾಯ ಕಾರ್ಯಕ್ರಮಕ್ಕೆ ಸೂಚಿಸಿರುವುದು ಸ್ವಾತಂತ್ರ್ಯ ಹೋರಾಟದ ಆಶಯವನ್ನು ಅಣಕಿಸುವಂತಿದೆ.

ಸ್ವಾತಂತ್ರ್ಯ ಹೋರಾಟವು ಭಾರತವನ್ನು ಬ್ರಿಟಿಷ್ ಆಡಳಿತದಿಂದ ಬಿಡುಗಡೆಗೊಳಿಸುವ ಆಶಯದ ಜೊತೆಗೆ ಸಾಮಾ ಜಿಕ, ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಆಶಯಗಳನ್ನು ಒಳಗೊಂಡಿತ್ತು. ಈ ನೆಲೆಯಲ್ಲಿ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದವರು ಪ್ರತಿಪಾದಿಸಿದ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಗಳಿಗೂ ಸೂರ್ಯ ನಮಸ್ಕಾರಕ್ಕೂ ಸಂಬಂಧವೇ ಇಲ್ಲ. ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಸ್ವತಂತ್ರವಾಗಿ ಏರ್ಪಡಿಸುವ ಸ್ವಾತಂತ್ರ್ಯವನ್ನು ಪಡೆದಿದೆ. ಆದರೆ ಸರ್ಕಾರವೇ ಅದರ ಪ್ರಮುಖ ಭಾಗವಾಗಿರುವುದು ಸೂಕ್ತವಲ್ಲ. ಒಂದುವೇಳೆ ಬೇರೆಬೇರೆ ಸಂಸ್ಥೆಗಳು ತಮ್ಮ ನಂಬಿಕೆ ಮತ್ತು ಆಚರಣೆಗಳನ್ನು ಆಧರಿಸಿ ಕೋಟ್ಯಂತರ ಜನರನ್ನು ಸೇರಿಸಲು ಅಪೇಕ್ಷೆಪಟ್ಟರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕೃತವಾಗಿ ಭಾಗೀದಾರ ಆಗಬೇಕಾಗುತ್ತದೆ. ಭಾಗೀದಾರ ಆಗದಿದ್ದರೆ ಪಕ್ಷಪಾತವಾಗುತ್ತದೆ. ಇಷ್ಟಕ್ಕೂ ಸರ್ಕಾರಗಳು ಮಾಡಬೇಕಾದ ಕಾರ್ಯಕ್ರಮಗಳು ಬೇರೆಯೇ ಇವೆ.

ಬಹುಮುಖ್ಯವಾಗಿ ಸ್ವಾತಂತ್ರ್ಯ ಹೋರಾಟದ ಧಾರೆಗಳನ್ನು ಪರಿಚಯಿಸುವ ಮತ್ತು ದ್ವೇಷ ಬಿಟ್ಟು ದೇಶ ಕಟ್ಟುವ ದೇಶಭಕ್ತಿಯ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವ ಬದಲು ಸಂಸ್ಥೆಯೊಂದರ ಇಂತಹ ಕಾರ್ಯಕ್ರಮಕ್ಕೆ ಸರ್ಕಾರಗಳು ಅಧಿಕೃತವಾಗಿ ಆದ್ಯತೆ ನೀಡುವುದು ಹೋರಾಟ ಮತ್ತು ಸಂವಿಧಾನಾತ್ಮಕ ಆಶಯಗಳಿಗೆ ವಿರುದ್ಧವಾದ ನಡೆಯಾಗಿದೆ. ಇದರಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಉದಾತ್ತ ಕಲ್ಪನೆಯನ್ನೇ ಕುಬ್ಜಗೊಳಿಸಿದಂತಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಆಯಾ ಸಂಸ್ಥೆಗಳ ಸ್ವತಂತ್ರ ವ್ಯವಸ್ಥೆಗೆ ಬಿಟ್ಟು ಸರ್ಕಾರವು ಡಾ. ಅಂಬೇಡ್ಕರ್ ಅವರ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳ ಕಾರ್ಯಕ್ರಮಗಳನ್ನು ಏರ್ಪಡಿಸಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅರ್ಥಪೂರ್ಣ
ಗೊಳಿಸಬೇಕು. ಈಗ ನೀಡಿರುವ ಸೂಚನೆಗಳನ್ನು ವಾಪಸ್ ಪಡೆಯಬೇಕು. ವಾಪಸ್ ಪಡೆಯುವಂತೆ ನೈಜ ದೇಶಪ್ರೇಮಿ ಗಳು ಒತ್ತಾಯಿಸಬೇಕು.→→→ಬರಗೂರು ರಾಮಚಂದ್ರಪ್ಪ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.