ಭಾನುವಾರ, ಜೂನ್ 26, 2022
26 °C

ವಾಚಕರ ವಾಣಿ| ಶಿಕ್ಷಕರ ವೇತನಕ್ಕೆ ದಿನಾಂಕ ನಿಗದಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರವು ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ ₹ 7,500 ಮತ್ತು ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ ₹ 8,000 ಇದ್ದಂತಹ ವೇತನವನ್ನು ಕ್ರಮವಾಗಿ ₹ 10,000 ಮತ್ತು ₹ 10,500ಕ್ಕೆ ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ. ಈ ವೇತನ ಕೂಡ ಅವರಿಗೆ ಕಡಿಮೆಯೇ ಆಗಿದೆ. ಏಕೆಂದರೆ, ಸರ್ಕಾರಿ ಕಾಯಂ ಹುದ್ದೆಯಲ್ಲಿರುವ ಶಿಕ್ಷಕರಂತೆ ಅವರು ಸಹ ಶಾಲೆಯಲ್ಲಿ ಸಕ್ರಿಯರಾಗಿ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉದ್ಯೋಗ ಭದ್ರತೆ ಇಲ್ಲದೆ ಕಡಿಮೆ ವೇತನಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ದುಬಾರಿ ಜೀವನವೆಚ್ಚದ ಈ ದಿನಮಾನಗಳಲ್ಲಿ ಇಷ್ಟು ಕಡಿಮೆ ವೇತನದಲ್ಲಿ ಕುಟುಂಬದ ಜವಾಬ್ದಾರಿ ನಿರ್ವಹಿಸುವುದು ತ್ರಾಸದಾಯಕ. ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಮನೆ ಬಾಡಿಗೆಗೆ ಹಾಗೂ ಇನ್ನಿತರ ಖರ್ಚುವೆಚ್ಚಕ್ಕೆ ಅವರಿಗೆ ಈ ವೇತನ ಸಾಕಾಗುವುದಿಲ್ಲ. ಆದ್ದರಿಂದ ವೇತನವನ್ನು ಇನ್ನೂ ಹೆಚ್ಚಿಸಬೇಕು ಮತ್ತು ಅವರಿಗೆ ವೇತನವನ್ನು ನೀಡಲು ಕಡ್ಡಾಯವಾಗಿ ದಿನಾಂಕವನ್ನು ನಿಗದಿಗೊಳಿಸಿ ಅನುಕೂಲ ಕಲ್ಪಿಸಬೇಕು.

- ಮಹೇಶ್ ಕೂದುವಳ್ಳಿ, ಚಿಕ್ಕಮಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು