ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಆತ್ಮಾವಲೋಕನ ಮಾಡಿಕೊಳ್ಳಬೇಕಾದವರು ಯಾರು?

Last Updated 24 ಜನವರಿ 2023, 19:31 IST
ಅಕ್ಷರ ಗಾತ್ರ

‘ಬಿಜೆಪಿ ಸರ್ಕಾರದ ದುರಾಡಳಿತವನ್ನು ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ಆದರೆ ಇಂತಹ ಸರ್ಕಾರ ಬರಲು ಕಾರಣರಾದವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದಿದ್ದಾರೆ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ (ಪ್ರ.ವಾ., ಜ. 24). ಐದು ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರಬಾರದೆಂದೇ ಕಾಂಗ್ರೆಸ್ ಪಕ್ಷವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಆದರೆ ನಂತರದ ಬೆಳವಣಿಗೆಯಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವು ಶಾಸಕರು ಬಿಜೆಪಿ ಜೊತೆ ಕೈಜೋಡಿಸಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪದಚ್ಯುತ ಗೊಳಿಸಿದರು. ಇದು ಈಚಿನ ಇತಿಹಾಸ. ಆದರೆ ಅದಕ್ಕೂ ಹಿಂದೆ ತಮ್ಮ ಪಕ್ಷದ ಜಾತ್ಯತೀತ ಮೌಲ್ಯವನ್ನೇ ಹಾಸ್ಯಾಸ್ಪದ ರೀತಿಯಲ್ಲಿ ಕಡೆಗಣಿಸಿ, ಬಿಜೆಪಿ ಜೊತೆಗೆ ಹೋದವರು ಕುಮಾರಸ್ವಾಮಿಯವರೇ ಅಲ್ಲವೆ?!

ನಂತರ ಅದೇ ಬಿಜೆಪಿಯು ಜೆಡಿಎಸ್ ಪಕ್ಷಕ್ಕೆ ವಿಶ್ವಾಸದ್ರೋಹದ ಪಟ್ಟ ಕಟ್ಟಿ, ಜೆಡಿಎಸ್ ಪಕ್ಷವನ್ನು ನಾಶ ಮಾಡಲು ಯತ್ನಿಸಿತು. ಇಲ್ಲೆಲ್ಲ ಕುಮಾರಸ್ವಾಮಿ ಅವರ ವಿವೇಚನಾರಹಿತ ಅಧಿಕಾರದಾಹವು ರಾಜ್ಯದ ಜನರಿಗೆ ಆಶ್ಚರ್ಯ ಮತ್ತು ನೋವು ಉಂಟುಮಾಡಿತು. ಬಿಜೆಪಿ ರಾಜ್ಯದಲ್ಲಿ ತಳವೂರಲು ಕಾರಣರಾದದ್ದೇ ಕುಮಾರಸ್ವಾಮಿ ಅವರ ಈ ದುಡುಕು ನಿರ್ಧಾರ. ಇದು ಕೂಡ ನಮ್ಮ ರಾಜ್ಯದ ಇತಿಹಾಸವೇ ಅಲ್ಲವೆ?! ರಾಜ್ಯದ ಜನರು ಇದೆಲ್ಲವನ್ನೂ ಬಲ್ಲರು. ಆದ್ದರಿಂದ ಇತಿಹಾಸಕ್ಕೆ ಅಪಚಾರವಾಗುವಂತೆ ಯಾರೂ ಮಾತಾಡಬಾರದು.

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT