ಪ್ರಜಾಪ್ರಭುತ್ವ- ಅರಾಜಕತೆ

7

ಪ್ರಜಾಪ್ರಭುತ್ವ- ಅರಾಜಕತೆ

Published:
Updated:

‘ಪೂರ್ವಗ್ರಹದ ಮನಸ್ಸು’ (ವಾ.ವಾ., ಸೆ.11) ಪತ್ರದಲ್ಲಿ ಪ್ರೊ. ಶಿವರಾಮಯ್ಯ ಅವರು ‘ನಕ್ಸಲ್‌ ಚಳವಳಿಯ ಉಗಮಕ್ಕೆ ಜಡಗಟ್ಟಿದ ವ್ಯವಸ್ಥೆ, ಸಂವೇದನಾರಹಿತ ಪ್ರಭುತ್ವಗಳು ಕಾರಣ’ ಎಂದು ಹೇಳಿದ್ದಾರೆ. ಇದರಲ್ಲಿ ಸತ್ಯಾಂಶವಿಲ್ಲದಿಲ್ಲ. ಆದರೆ ನಕ್ಸಲರು ತುಳಿದಿರುವ ಮಾರ್ಗ ಸರಿಯಾದುದೇ ಎಂಬುದು ಚಿಂತನಾರ್ಹ.

ಸರ್ಕಾರ ನಿರ್ಮಿಸುವ ರಸ್ತೆಗಳನ್ನು ಧ್ವಂಸಗೊಳಿಸುವುದರಿಂದ, ಸರ್ಕಾರದ ಸೇವೆಗಳು ಸೌಲಭ್ಯವಂಚಿತ ಗ್ರಾಮಗಳಿಗೆ ತಲುಪುವುದಕ್ಕೆ ಅಡ್ಡಗಾಲು ಹಾಕುವುದರಿಂದ ಏನು ಸಾಧಿಸಿದಂತಾಗುತ್ತದೆ? ನಕ್ಸಲರ ಹಿಂಸಾತ್ಮಕ ಹೋರಾಟದಿಂದ ಅಮಾಯಕ ಪೊಲೀಸರು, ಯೋಧರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಕ್ಸಲ್‌ಪೀಡಿತ ಗ್ರಾಮಗಳ ಜನರು ಒಂದೆಡೆ ಪೊಲೀಸರ, ಇನ್ನೊಂದೆಡೆ ನಕ್ಸಲರ ಭಯದಲ್ಲಿ ಬದುಕುತ್ತಿದ್ದಾರೆ.

ಸಂವಿಧಾನ ಅಂಗೀಕಾರದ ಹಿಂದಿನ ದಿನ (1949 ನ. 25) ಸಂವಿಧಾನ ಸಭೆಯನ್ನುದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಅವರು ‘ನಾವು ಪ್ರಜಾಪ್ರಭುತ್ವವನ್ನು ಅದರ ಮೂಲ ಸತ್ವದೊಂದಿಗೆ ಉಳಿಸಿಕೊಳ್ಳಬೇಕಾದರೆ, ನಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸಬೇಕು. ಕ್ರಾಂತಿಯ, ನಾಗರಿಕ ಅಸಹಕಾರದ ಮಾರ್ಗಗಳನ್ನು ತೊರೆಯಬೇಕು’ ಎಂದು ಕರೆ ನೀಡುತ್ತಾರೆ (ಈ ಭಾಷಣವು ‘ಗ್ರಾಮರ್ ಆಫ್ ಅನಾರ್ಕಿ’ ಎಂದು ಹೆಸರಾಗಿದೆ). ಈ ಮಾತುಗಳನ್ನು ಮರೆಯಬಾರದು.

ನಕ್ಸಲರ ಕುರಿತು ಸಹಾನುಭೂತಿ ಇರುವವರು ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಾಂವಿಧಾನಿಕ ಮಾರ್ಗದಲ್ಲಿ ಹೋರಾಡುವಂತೆ ಪ್ರೇರೇಪಿಸುವುದನ್ನು ಬಿಟ್ಟು ಅವರ ಹಿಂಸಾತ್ಮಕ ಹೋರಾಟವನ್ನು ಸಮರ್ಥಿಸುವುದರಿಂದ ಅರಾಜಕತಾವಾದವನ್ನು ಬೆಂಬಲಿಸಿದಂತಾಗುತ್ತದೆ‌.

ಡಾ. ಅನಿಲ್ ಎಂ. ಚಟ್ನಳ್ಳಿ, ಕಲಬುರ್ಗಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !