ಪಾಸ್ ಸಮಸ್ಯೆ ಬಗೆಹರಿಸಿ

7

ಪಾಸ್ ಸಮಸ್ಯೆ ಬಗೆಹರಿಸಿ

Published:
Updated:

ಶಾಲಾ- ಕಾಲೇಜುಗಳು ಆರಂಭವಾಗಿ, ಇನ್ನೇನು ಸೆಮಿಸ್ಟರ್ ಪರೀಕ್ಷೆಗಳು ಬರುತ್ತಿವೆ. ಆದರೆ ವಿದ್ಯಾರ್ಥಿಗಳಿಗೆ ಇನ್ನೂ ಉಚಿತ ಬಸ್ ಪಾಸ್ ನೀಡದೆ ಇರುವುದು ವಿಪರ್ಯಾಸ.

ಬಸ್ ಪಾಸ್‌ಗಾಗಿ ವಿದ್ಯಾರ್ಥಿಗಳು ದಿನನಿತ್ಯ ಕೌಂಟರ್ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಉಚಿತ ಪಾಸ್‌ ಕೊಡುವುದಿರಲಿ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸುವುದೂ ಇಲ್ಲ. ದಿನಕ್ಕೊಂದು ಹೇಳಿಕೆ ನೀಡುತ್ತಾ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಲಾಗುತ್ತಿದೆ.

ಬಸ್‌ ಚಾಲಕ, ನಿರ್ವಾಹಕರಿಗೆ ವಿದ್ಯಾರ್ಥಿಗಳೆಂದರೆ ಮೊದಲೇ ಅಲರ್ಜಿ. ಅಂಥದ್ದರಲ್ಲಿ ಪಾಸ್‌ ಇಲ್ಲ ಎಂದರೆ ಹೇಗೆ! ಪೂರ್ತಿ ಹಣ ಕೊಟ್ಟು ಪ್ರಯಾಣಿಸಿ ಎಂದು ಅವರು ತಾಕೀತು ಮಾಡುತ್ತಾರೆ. ಅನೇಕ ವಿದ್ಯಾರ್ಥಿಗಳು ಈ ಸಂಕಷ್ಟ ಅನುಭವಿಸುತ್ತಿದ್ದಾರೆ.

ಈಗ ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಬೇಕು ಎಂದು ಸೂಚಿಸಿ, ಬಿಎಂಟಿಸಿಯ ವೆಬ್‌ಸೈಟ್ ವಿಳಾಸವನ್ನು ನೀಡಲಾಗಿದೆ. ಇದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಆ ವೆಬ್‌ಸೈಟ್‌ ಸಂಪರ್ಕಿಸುವುದೂ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರವು ಈ ಹಿಂದೆ ಇದ್ದ ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಿ, ಆದಷ್ಟು ಬೇಗ ಪಾಸ್ ದೊರಕುವಂತೆ ಮಾಡಬೇಕು.

ಭಾವನಾ ಎಸ್, ಕನಕಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !