ಮರೆತ ವಿಚಾರ

7

ಮರೆತ ವಿಚಾರ

Published:
Updated:

‘ಗಾಂಧಿ ಎಂಬ ವಿಶ್ವಪ್ರಜ್ಞೆಗೆ ನಮಿಸುತ್ತಾ...’ (ಸಂಗತ, ಅ.1) ಲೇಖನ ಅರ್ಥಗರ್ಭಿತ. ಆದರೆ ಲೇಖಕರು ಒಂದು ವಿಚಾರವನ್ನು ಮರೆತಂತೆ ಅಥವಾ ಉಪೇಕ್ಷಿಸಿದಂತಿದೆ.

ಗಾಂಧಿ, ಭಾರತ ಕಂಡ ಶ್ರೇಷ್ಠ ಸಂತರಲ್ಲೊಬ್ಬರು. ‘ರಾಮನಾಮ ನನ್ನ ಉಸಿರು’ ಎಂದು ಅವರು ಹೇಳಿದ್ದಿದೆ. ಗೋಡ್ಸೆಯ ಗುಂಡಿಗೆ ಎದೆಗೊಟ್ಟು, ಕೊನೆಯ ಉಸಿರೆಳೆಯುವಾಗಲೂ ಅವರು ‘ಹೇ ರಾಮ್’ ಎಂದಿದ್ದರು. ‘ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ’ ಎಂಬ ಭಜನೆ ಅವರಿಗೆ ಪ್ರಿಯವಾದದ್ದು. ಗಾಂಧಿಯ ಕಾರಣಕ್ಕೇ ಈ ಗೀತೆ ರಾಷ್ಟ್ರದಾದ್ಯಂತ ಈಗಲೂ ಮೊಳಗುತ್ತಿದೆ.

ಇಷ್ಟೊಂದು ಧಾರ್ಮಿಕ ಮನಸ್ಥಿತಿ ಇದ್ದರೂ ಗಾಂಧಿ ಮತಾಂಧರಾಗಿರಲಿಲ್ಲ. ‘ರಾಮ ರಹೀಮ ತೇರೇ ನಾಮ್ ಕೃಷ್ಣ ಕರೀಮ ಪಾವನ ನಾಮ್’ ಎಂದು ತಮ್ಮ ಅಂತಃಕರಣವನ್ನು ತೆರೆದಿಟ್ಟಿದ್ದರು. ಆ ಕಾರಣಕ್ಕಾಗಿಯೇ ಗಾಂಧಿಯನ್ನು ನಿಂದಿಸಿದವರೂ ಇದ್ದಾರೆ. ಧರ್ಮದ ಆಧಾರದಲ್ಲೇ ರಾಜಕೀಯ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಧರ್ಮ ಸಹಿಷ್ಣುತೆಯ ಬಗ್ಗೆ ಗಾಂಧೀಜಿಯ ನಿಲುವನ್ನು ನೆನಪಿಸಿಕೊಳ್ಳುವುದೂ ಪ್ರಸ್ತುತವೆನಿಸುತ್ತದೆ.

ವೆಂಕಟೇಶ್ ಮೂರ್ತಿ, ಚಿಂತಾಮಣಿ
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !