ಅಸ್ಮಿತೆಯ ವೇದಿಕೆಯಾಗಲಿ

7

ಅಸ್ಮಿತೆಯ ವೇದಿಕೆಯಾಗಲಿ

Published:
Updated:

ಡಿಸೆಂಬರ್ ತಿಂಗಳಿನಲ್ಲಿ ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆ ಮಾಡಿರುವುದು ಸಂತಸದ ಸಂಗತಿ.

ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ (ಸೆ.28) ಕಂಬಾರರು, ‘ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿಸುವ, ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸುವ ಸರ್ಕಾರದ ಜವಾಬ್ದಾರಿಯನ್ನು ಕುರಿತು ಚರ್ಚಿಸುವ ಹೊಣೆ ಸಾಹಿತ್ಯ ಸಮ್ಮೇಳನಗಳದ್ದಾಗಿದೆ’ ಎಂದು ಹೇಳಿರುವುದು ಅವರ ಕನ್ನಡಪರ ಕಾಳಜಿ ಮತ್ತು ಬದ್ಧತೆಯ ಸಂಕೇತ. ಸಮ್ಮೇಳನಾಧ್ಯಕ್ಷರ ಆಶಯದಂತೆ, ಕನ್ನಡದ ಅಸ್ಮಿತೆ ಮತ್ತು ನಾಡ ಅಭಿವೃದ್ಧಿಯನ್ನು ಕುರಿತ ಮಹತ್ವದ ಚಿಂತನ- ಮಂಥನಗಳು ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲೆಂದು ಹಾರೈಸೋಣ.

ಪ್ರೊ.ಸಿ.ಪಿ. ಸಿದ್ಧಾಶ್ರಮ, ಮೈಸೂರು
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !