ಸಂಪ್ರದಾಯವನ್ನು ಗೌರವಿಸಿ

7

ಸಂಪ್ರದಾಯವನ್ನು ಗೌರವಿಸಿ

Published:
Updated:

ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಪರ– ವಿರೋಧಗಳು ವ್ಯಕ್ತವಾಗುತ್ತಿವೆ. ಒಬ್ಬ ಅಯ್ಯಪ್ಪ ಮಾಲಾಧಾರಿ ಭಕ್ತನಾಗಿ ಈ ತೀರ್ಪನ್ನು ಸ್ವೀಕರಿಸುವುದು ಕಷ್ಟವಾಗುತ್ತಿದೆ.

‘ಲಿಂಗ ಸಮಾನತೆಯ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವದ್ದು’ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗೆ ನೋಡಿದರೆ ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶಕ್ಕೆ ನಿಷೇಧ ಇರಲಿಲ್ಲ. ಹತ್ತು ವರ್ಷದ ಒಳಗಿನವರು ಮತ್ತು ಐವತ್ತು ವರ್ಷ ಮೇಲ್ಪಟ್ಟವರು ಇಂದಿಗೂ ದೇವರ ದರ್ಶನ ಮಾಡುತ್ತಿದ್ದಾರೆ. ಈ ನಡುವಿನ ವಯಸ್ಸಿನವರಿಗೆ ಮಾತ್ರ ನಿಷೇಧವಿತ್ತು.

ದೇಶದಲ್ಲಿ ಅಯ್ಯಪ್ಪ ಸ್ವಾಮಿಯ ಸಾವಿರಾರು ದೇವಸ್ಥಾನಗಳಿವೆ. ಯಾವ ದೇವಸ್ಥಾನಕ್ಕೂ ಮಹಿಳೆಯರ ಪ್ರವೇಶಕ್ಕೆ ನಿಷೇಧವಿಲ್ಲ. ಶಬರಿಮಲೆಯಲ್ಲಿ ನೈಷ್ಠಿಕ ಬ್ರಹ್ಮಚಾರಿ ಅಯ್ಯಪ್ಪನ ಆರಾಧನೆ ನಡೆಯುತ್ತದೆ. ಈ ಆರಾಧನೆಯಲ್ಲಿ ಪಾಲ್ಗೊಳ್ಳುವವರ ನಂಬಿಕೆಗೆ ಅನುಗುಣವಾಗಿ ಇಷ್ಟು ದಿನ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದು ಸಂಪ್ರದಾಯಕ್ಕೆ ಸಂಬಂಧಿಸಿದ ವಿಚಾರ. ಆದ್ದರಿಂದ ಇದನ್ನು ಮೀರುವುದು ಉಚಿತವಲ್ಲ.

ಮಣಿಕಂಠ ಪಾ. ಹಿರೇಮಠ, ಚವಡಾಪೂರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !