ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಮತ್ತು ಕಂಬಾರ

Last Updated 23 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ಡಾ. ಚಂದ್ರಶೇಖರ ಕಂಬಾರರು 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ (ಅವರಿಗೆ ಅಭಿನಂದನೆಗಳು).

ಒಂದು ಸ್ವಾರಸ್ಯವೆಂದರೆ, ರಾಷ್ಟ್ರಕವಿ ಕುವೆಂಪು ತಮ್ಮ ‘ಶ್ರೀ ರಾಮಾಯಣ ದರ್ಶನ’ದ ಆದಿಯಲ್ಲಿ (ಪುಟ 6) ಕಂಬಾರರನ್ನು ಸ್ಮರಿಸಿರುವುದು: ‘... ನನ್ನಯ್ಯ ಫಿರ್ದೂಸಿ ‘ಕಂಬಾರ’ವಿಂದರಿಗೆ...’ ಇಲ್ಲಿ ‘ಕಂಬಾರವಿಂದರಿಗೆ’ ಎಂಬುದನ್ನು ‘ಕಂಬ– ಅರವಿಂದರಿಗೆ’ ಎಂದು ಬಿಡಿಸಬೇಕು ಎಂದು ಕೆಲವರು ಹೇಳಬಹುದು. ಆದರೆ ‘ಕಂಬಾರ–ವಿಂದರಿಗೆ’ ಎಂದೂ ಬಿಡಿಸಬಹುದಲ್ಲ! ಹಾಗಾದರೆ, ‘ವಿಂದ’ ಎಂದರೇನು? ಅದು ‘ಅರವಿಂದ’ ಶಬ್ದದ ಹ್ರಸ್ವರೂಪವಾಗಬಹುದು (ಅರ್ಥರಹಿತವಲ್ಲ, ‘ವಿಂದ’; ಅದಕ್ಕೆ ಕಾಯುವವನು ಎಂದರ್ಥ).

ಒಟ್ಟಿನಲ್ಲಿ, ಕುವೆಂಪು ಅವರಿಂದ (ಅ‍ಪ್ರಜ್ಞಾಪೂರ್ವಕವಾಗಿ?) ಹೆಸರುಗೊಂಡಿರುವ ಚಂ. ಕಂಬಾರರು ಧನ್ಯರಲ್ಲವೆ? (ದ್ರಷ್ಟಾರರಾದ ಕುವೆಂಪು ಹಿಂದಿನವರಿಗೆ ಮಾತ್ರವಲ್ಲ, ಮುಂದಿನವರಿಗೂ ಮಣಿದಿದ್ದಾರೆ!)

-ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT