ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ: ನಿಲುಕದ ನಕ್ಷತ್ರವೇ?

Last Updated 1 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಸರ್ಕಾರದ ಹಲವು ಇಲಾಖೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದ್ದರೂ ಶಿಕ್ಷಕರಿಗೆ ಮಾತ್ರ ವರ್ಗಾವಣೆ ಎಂಬುದು ನಿಲುಕದ ನಕ್ಷತ್ರವಾಗಿದೆ.

‘ವರ್ಗಾವಣೆ ಪ್ರಕ್ರಿಯೆ ನಾಳೆಯಿಂದ ಆರಂಭ, ನಾಡಿದ್ದಿನಿಂದ ಆರ೦ಭ’ ಎಂದು ಕೇಳುವುದೇ ಆಗಿದೆ. ಶಿಕ್ಷಣ ಸಚಿವರ ರಾಜೀನಾಮೆಯು ಶಿಕ್ಷಕರ ವರ್ಗಾವಣೆಯ ನಿರೀಕ್ಷೆಯ ಮೇಲೆ ಮೊದಲು ತಣ್ಣೀರೆರಚಿತು. ‘ವರ್ಗಾವಣೆಯನ್ನು ಮುಂದಿನ ಏಪ್ರಿಲ್‌ಗೆ ಮುಂದೂಡಿ’ ಎಂದು ಮುಖ್ಯಮಂತ್ರಿಯೇ ಈಗ ಸೂಚನೆ ನೀಡಿದ್ದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ವರ್ಗಾವಣೆಯ ಆಸೆಯನ್ನೇ ಕೈಬಿಡುವ೦ತಾಗಿದೆ.

2019ರ ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಆಗಲೂ ವರ್ಗಾವಣೆ ಪ್ರಕ್ರಿಯೆ ನಡೆಯುವುದು ಅನುಮಾನವೇ. ಬೋಧನೆಯ ಜೊತೆಜೊತೆಗೆ ಸರ್ಕಾರವು ವಹಿಸುವ ನೂರೆಂಟು ಕೆಲಸಗಳನ್ನೂ ಮಾಡುವ ಶಿಕ್ಷಕ ಸಮೂಹದ ಬಗ್ಗೆ ಸರ್ಕಾರದ ಈ ನಿರ್ಲಕ್ಷ್ಯ ಸರಿಯಲ್ಲ. ಎಲ್ಲ ಸಮಸ್ಯೆಗಳಿಗೂ ಒಂದಿಲ್ಲೊಂದು ಪರಿಹಾರ ಇರುತ್ತದೆ. ಹಾಗಿರುವಾಗ ಶಿಕ್ಷಕರ ವರ್ಗಾವಣೆಗೆ ಕು೦ಟುನೆಪ ಹೇಳದೇ ಸಮಸ್ಯೆಗೆ ಪರಿಹಾರ ಕ೦ಡುಕೊ೦ಡು ವರ್ಗಾವಣೆಗಾಗಿ ಚಾತಕ ಪಕ್ಷಿಯ೦ತೆ ಕಾಯುತ್ತಾ ಕುಳಿತಿರುವ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು.

ಜಿ.ಪಿ.ಬಿರಾದಾರ, ಮುಳಸಾವಳಗಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT