ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೇಟಿ ವಿದ್ಯೆ’ಗಿಂತ ‘ಮೇಸ್ತ್ರಿ ವಿದ್ಯೆ’ಯೇ ಮೇಲು!

Last Updated 9 ನವೆಂಬರ್ 2018, 20:15 IST
ಅಕ್ಷರ ಗಾತ್ರ

ನಮ್ಮ ವಿಶ್ವವಿದ್ಯಾಲಯಗಳನ್ನು ಕುರಿತಂತೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಒಳನೋಟ’ (ಅ. 28) ಹಾಗೂ ಆನಂತರ ಪ್ರಕಟವಾದ ಸಂಪಾದಕೀಯಕ್ಕೆ (ಅ. 30)ಈ ಪ್ರತಿಕ್ರಿಯೆ.

ಸರ್ವಜ್ಞನು, ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂದು ಹೇಳಿ ಶತಮಾನಗಳು ಕಳೆದವು. ಇವತ್ತು ಎಲ್ಲಾ ಕುಲಪತಿಗಳು ಕಟ್ಟಡಗಳನ್ನು ಕಟ್ಟಿಸುವ ಮೇಸ್ತ್ರಿ ಕೆಲಸವನ್ನು ಮಾಡುತ್ತಿದ್ದಾರೆ. ಸರ್ವಜ್ಞ ‘ಮೇಟಿ’ ಎಂದರೆ, ‘ಕೃಷಿ ವಿದ್ಯೆ’ ಎಂಬ ಅರ್ಥದಲ್ಲಿ ಬಳಸಿದ್ದನು. ನಮ್ಮ ಕುಲಪತಿಗಳು ಅದನ್ನು ‘ಮೇಸ್ತ್ರಿ’ ಎಂದು ಅರ್ಥ ಮಾಡಿಕೊಂಡಂತಿದೆ. ತಾವು ‘ಕುಲಪತಿ’ ಆಗುವುದಕ್ಕೆ ಕೊಟ್ಟು ಬಂದ ‘ಕೋಟಿ’ಗಳನ್ನು ಮರಳಿ ಸಂಪಾದಿಸಲು ಈ ‘ಮೇಸ್ತ್ರಿ ದಾರಿ’ಯನ್ನು ಹಿಡಿದಿದ್ದಾರೆ. ಇದರಲ್ಲಿ ಅವರದೇನು ತಪ್ಪಿದೆ? ಹಿಂದಿನ ರಾಜ್ಯಪಾಲರು ಇದಕ್ಕೆ ನಾಂದಿ ಹಾಡಿದ್ದರು, ಅದಕ್ಕೆ ದಲ್ಲಾಳಿ ಕುಲಪತಿಗಳೂ ಇದ್ದರು.

ಈಗ, ಇದ್ದ ಸಿಂಡಿಕೇಟ್ ಸದಸ್ಯರನ್ನು ಸಹ ವಜಾ ಮಾಡಿ, ‘ಮೇಸ್ತ್ರಿ’ ಕೆಲಸ ಮಾಡಿ ಕಳಪೆ ಕಟ್ಟಡಗಳನ್ನು ಕಟ್ಟಿ ಹಣ ಮಾಡಿಕೊಳ್ಳಲು ಹಾಲಿ ಕುಲಪತಿಗಳಿಗೆ ಅವಕಾಶ ಕಲ್ಪಿಸಿರುವ ವಿದ್ಯಾಮಂತ್ರಿಗೆ ಜೈ ಅನ್ನದೆ ಬೇರೆ ದಾರಿಯೇ ಇಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT