ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಜಿ ವರದಿಯ ಉತ್ತರದಾಯಿತ್ವ

Last Updated 9 ಡಿಸೆಂಬರ್ 2018, 20:30 IST
ಅಕ್ಷರ ಗಾತ್ರ

2016-17ನೇ ಸಾಲಿನ ಮಹಾಲೇಖಪಾಲರ (ಸಿಎಜಿ) ವರದಿಯು ಒಂದು ನಿರ್ಣಯವಲ್ಲ, ಅಂತಿಮ ನಿರ್ದಾರವೂ ಅಲ್ಲ. ಅದೊಂದು ವರದಿ ಮಾತ್ರ. ಆದರೆ ಅದು ಮಹತ್ತರವಾದ ಸಂಗತಿಗಳನ್ನು ಹೊರಗೆಡವಿದೆ. ಬಹಳಷ್ಟು ಲೆಕ್ಕಪತ್ರಗಳು ತಾಳೆ ಆಗಬೇಕಾಗಿವೆ. ವರದಿಯು ವಿವಿಧ ಯೋಜನೆಗಳ ಹಣಕಾಸು ನಿರ್ವಹಣೆಯಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಿದೆ. ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿಗಳಾಗಲೀ, ಉಪಯೋಗಿಸದೆ ಇರುವ ಹಣವಾಗಲೀ... ಸರ್ಕಾರವು ತನ್ನ ವಿವೇಚನಾಶಕ್ತಿ ಬಳಸಿ ಮಾಡಿದ ಹೆಚ್ಚುವರಿ ಖರ್ಚು– ವೆಚ್ಚಗಳಿಗೆ ಉತ್ತರದಾಯಿತ್ವವೇ ಇಲ್ಲ. ‘ವಿವೇಚನೆ’ ಎನ್ನುವ ಶಕ್ತಿಗೆ ಅರ್ಥವೇ ಇಲ್ಲದಂತೆ ತೋರುತ್ತದೆ. ಹಾಗೆಂದ ಮಾತ್ರಕ್ಕೆ ಹಣದ ಅವ್ಯವಹಾರ ನಡೆದಿದೆ ಅಥವಾ ಇಲ್ಲ ಎನ್ನುವುದು ವರದಿಯಲ್ಲಿ ಮೇಲ್ನೋಟಕ್ಕೆ ಎಲ್ಲಿಯೂ ಉಲ್ಲೇಖವಾಗಿಲ್ಲ ಎನ್ನುವುದೂ ಗಮನಾರ್ಹ.

ಈ ವರದಿಗೆ ಸಂಬಂಧಿಸಿದಂತೆ ವಿಧಾನ ಮಂಡಲದ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಗೆ ಅನುವು ಮಾಡಿಕೊಟ್ಟಲ್ಲಿ ರಾಜ್ಯದ ಜನರಿಗೆ ಸರ್ಕಾರದ ಉತ್ತರದಾಯಿತ್ವದ ಬಗ್ಗೆ ವಿಶ್ವಾಸ ಹಾಗೂ ಹಣಕಾಸು ಸ್ಥಿತಿಯ ಬಗ್ಗೆ ಸ್ಪಷ್ಟ ಅರಿವು ಹಾಗೂ ನಂಬಿಕೆ ಮೂಡುತ್ತದೆ.

ಆರ್‌.ಜಿ. ಮುರಳೀಧರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT