ಕಾಟಾಚಾರದ ದತ್ತಿ ಉಪನ್ಯಾಸ

7

ಕಾಟಾಚಾರದ ದತ್ತಿ ಉಪನ್ಯಾಸ

Published:
Updated:

ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರಿಗೆ ಕನ್ನಡ ನಾಡಿನ, ಇತಿಹಾಸ, ಪರಂಪರೆ, ಅಧ್ಯಾತ್ಮ, ಧಾರ್ಮಿಕ, ಸಾಹಿತ್ಯ ಕ್ಷೇತ್ರಗಳ ಪರಿಚಯ ಮಾಡಿಸಲು ದತ್ತಿ ಉಪನ್ಯಾಸ ಎಂಬ ಜನಪ್ರಿಯ ಕಾರ್ಯಕ್ರಮವನ್ನು ನಡೆಸುತ್ತಿದೆ.

ಇದಕ್ಕಾಗಿ ದಾನಿಗಳು ಕನ್ನಡ, ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ‘ದತ್ತಿ’ ಎಂಬ ಇಡುಗಂಟನ್ನು ಇಟ್ಟಿರುತ್ತಾರೆ. ಈ ದತ್ತಿಯ ಹಣ ಹತ್ತು ಸಾವಿರ ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿವರೆಗೂ ಇರುತ್ತದೆ. ದಾನಿಗಳು ಅಪೇಕ್ಷೆಪಟ್ಟ ವಿಷಯದ ಮೇಲೆ ದತ್ತಿ ನಿಧಿಯ ಬಡ್ಡಿಯಿಂದ ಬರುವ ಹಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಯಾ ತಾಲ್ಲೂಕು ಘಟಕವು ಶಾಲಾ ಕಾಲೇಜುಗಳಲ್ಲಿ ದತ್ತಿ ಉಪನ್ಯಾಸ ಏರ್ಪಡಿಸುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಚನ್ನಗಿರಿ ತಾಲ್ಲೂಕು ಘಟಕ ಒಟ್ಟು 41 ದತ್ತಿಗಳನ್ನು ಹೊಂದಿದೆ. ಈ ಘಟಕದ ಅಧ್ಯಕ್ಷರು ನವೆಂಬರ್ ತಿಂಗಳಲ್ಲಿ ಈ ದತ್ತಿ ಉಪನ್ಯಾಸವನ್ನು ನೆನಪು ಮಾಡಿಕೊಂಡು, ಒಂದೇ ದಿನದಲ್ಲಿ ಆರು ಉಪನ್ಯಾಸಗಳನ್ನು ಏರ್ಪಡಿಸಿ ಕಾಟಾಚಾರಕ್ಕೆ ಮಾಡಿ ಮುಗಿಸುತ್ತಿದ್ದಾರೆ. ಉಪನ್ಯಾಸಕರು ಸಹ ಘಟಕದ ಪದಾಧಿಕಾರಿಗಳೇ. ಆಗಿದ್ದು, ಮುಗ್ಧ ವಿದ್ಯಾರ್ಥಿಗಳಿಗೆ ಏನೋ ಹೇಳಿ ಮುಗಿಸುತ್ತಿದ್ದಾರೆ. ಈ ರೀತಿಯಾಗಿ ಕಾಟಾಚಾರದ ದತ್ತಿ ಉಪನ್ಯಾಸ ಆಯೋಜಿಸುವುದು ಸೂಕ್ತವೇ? ಇದಕ್ಕಾಗಿ ಪರಿಷತ್ತಿನಲ್ಲಿ ಸಾವಿರಾರು ರೂಪಾಯಿ ದತ್ತಿ ನಿಧಿ ಇಡಬೇಕೇ?

ವರ್ಷದಲ್ಲಿ 240 ದಿನ ಶಾಲಾ– ಕಾಲೇಜುಗಳು ನಡೆಯುತ್ತವೆ. ನಮ್ಮ ತಾಲ್ಲೂಕಿನಲ್ಲಿ ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಿವೆ. ಇನ್ನು ಮುಂದೆ ಇವುಗಳಲ್ಲಿ ದಿನಕ್ಕೆ ಒಂದರಂತೆ ದಾನಿಗಳು ಸೂಚಿಸಿರುವ ವಿಷಯದ ಮೇಲೆ ದತ್ತಿ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಏರ್ಪಡಿಸಬೇಕು. ಇಲ್ಲವಾದಲ್ಲಿ ದತ್ತಿಯ ಹಣವನ್ನು ಕೇಂದ್ರ ಸಾಹಿತ್ಯ ಪರಿಷತ್ ದಾನಿಗಳಿಗೆ ಹಿಂತಿರುಗಿಸಬೇಕು.

ಡಿ. ವೇದಮೂರ್ತಿ, ದೇವರಹಳ್ಳಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !