ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಚಲನಚಿತ್ರ ಉತ್ಸವ: ಕಲಿಯಬೇಕಾದ್ದೇನು?

Last Updated 29 ನವೆಂಬರ್ 2019, 19:33 IST
ಅಕ್ಷರ ಗಾತ್ರ

ಗೋವಾ ಚಲನಚಿತ್ರ ಉತ್ಸವದ ಸಮಾರೋಪ ಸಮಾರಂಭದಲ್ಲಿ ಕೊಟ್ಟ ಅಧಿಕೃತ ಅಂಕಿಅಂಶಗಳ ಪ್ರಕಾರ 12,000 ಪ್ರತಿನಿಧಿಗಳ ಪೈಕಿ 10,200 ಜನ ಕಾರ್ಡ್ ಪಡೆದರು. ಪ್ರತಿದಿನ ಸರಾಸರಿ ಮೂರಕ್ಕೂ ಹೆಚ್ಚು ಚಿತ್ರ ನೋಡಿದವರು 1,065 ಮಾತ್ರ. ಸೀಟು ಭರ್ತಿ ಪ್ರಮಾಣ 75%. ಉದ್ಘಾಟನಾ ಸಮಾರಂಭಕ್ಕೆ ಮುಕ್ಕಾಲು ಗಂಟೆ ಹಿಡಿದರೆ, ಸಮಾರೋಪ ಅದಕ್ಕೂ ಹೆಚ್ಚು (ಸುಮಾರು 3 ತಾಸು)! ಕೇಂದ್ರ ಸಚಿವರ ಸಲಹೆಯಂತೆ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಥೀಮ್‌, ನೃತ್ಯ–ಸಂಗೀತಗಳಲ್ಲಿ ಸ್ಥಾನ ಪಡೆಯಿತು. ಗವರ್ನರ್ ಕಾಶ್ಮೀರದ ಗುಂಗಲ್ಲೇ ಇದ್ದೇನೆ ಎಂದು ಅಪ್ರಾಸಂಗಿಕ ಮಾತುಗಳನ್ನಾಡಿದರು.

ಒಬ್ಬ ಹೆಸರಾಂತ ಹಾಡುಗಾರರಿಗೆ ಎರಡೂ ಸಮಾರಂಭಗಳಲ್ಲಿ ಅವಕಾಶ ಕೊಡಲಾಯಿತು. ಒಟ್ಟಾರೆ ಸರ್ಕಾರಗಳ ಛಾಪು ಹೆಚ್ಚಾಗಿತ್ತು. ಚಿತ್ರೋತ್ಸವಗಳಲ್ಲಿ ಚಿತ್ರಗಳು, ಅವುಗಳ ನಿರ್ದೇಶಕರು ಪ್ರಾಧಾನ್ಯ ಪಡೆಯಬೇಕು. ಕೆಲವು ಉನ್ನತ ಅಧಿಕಾರಿಗಳು, ಚಿತ್ರರಂಗದ ಕೆಲವು ಹಳಬರು ಅಗತ್ಯಕ್ಕಿಂತ ಹೆಚ್ಚು ಅವಕಾಶ, ಮಹತ್ವ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಇದಕ್ಕಾಗಿ ಮಧ್ಯವರ್ತಿಗಳಿಲ್ಲದ ಒಂದು ವ್ಯವಸ್ಥೆ
ರೂಪುಗೊಳ್ಳಬೇಕಿದೆ.

ಎಚ್.ಎಸ್.ಮಂಜುನಾಥ,ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT