ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ರೊಬೋಟ್‌ ಉತ್ತರಿಸಬೇಕಾದೀತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1ರಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಲು ಸರ್ಕಾರ ಚಿಂತನೆ ನಡೆಸಿರುವುದು, ಮಗುವನ್ನು ಕತ್ತಲೆಯ ಕಡೆಗೆ ತಳ್ಳುವಂತಿದೆ. ಮಗು ನಿಸರ್ಗದೊಡನೆ ಬೆಳೆಯಬೇಕೇ ಹೊರತು ನಾಲ್ಕು ಗೋಡೆಗಳ ಮಧ್ಯದಲ್ಲಿ ಅಲ್ಲ. ಮೇಲಾಗಿ, ಶಾಲೆಯು ಕೇವಲ ಅಂಕ ಗಳಿಸುವ ಅಥವಾ ಉದ್ಯೋಗಕ್ಕೆ ತರಬೇತಿ ನೀಡುವ ಕುಲುಮೆಯಲ್ಲ. ಅದು ಮಕ್ಕಳಿಗೆ ವಿಶ್ವದರ್ಶನ ಮಾಡಿಸುವ ಮಹಾಮಂದಿರ.

ಇಂದಿನ ಮಕ್ಕಳು ಈಗಾಗಲೇ ಮೊಬೈಲ್, ಟಿ.ವಿ., ಕಂಪ್ಯೂಟರ್ ಗೀಳಿನಿಂದ ಹೊರಬರಲಾಗದೆ ಕಲಿಕಾ ಆಸಕ್ತಿ ಕಡಿಮೆಯಾಗುತ್ತಿದೆ. ಒಮ್ಮೆ ಗೇರು ಬೀಜ ತಿಂದು ರುಚಿ ನೋಡಿದ ಮಕ್ಕಳು ಶೇಂಗಾ ಬೀಜ ತಿನ್ನಲು ಒಪ್ಪುವುದಿಲ್ಲ. ಹೀಗಿರುವಾಗ ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿ ಆನ್‌ಲೈನ್ ಪಾಠ ಮಾಡಿ, ದೊಡ್ಡವರಾದ ಮೇಲೆ ಅವರು ‘ಮನೆಯಿಂದಲೇ ಕೆಲಸ’ ಮಾಡಬೇಕಾದ ಕಂಪನಿಗೆ ಸೇರಿದರೆ, ಮುಂದೊಂದು ದಿನ ‘ಮನುಷ್ಯ ಎಂದರೆ ಯಾರು’ ಎಂಬ ಪ್ರಶ್ನೆಗೆ ರೊಬೋಟ್‌ ಉತ್ತರಿಸಬೇಕಾದೀತು.

-ಗಣಪತಿ ನಾಯ್ಕ, ಕಾನಗೋಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು