ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿಯ ಕಣ್ಣೀರಿನ ಹಿಂದೆ ಇರುವವರು...

Last Updated 30 ನವೆಂಬರ್ 2019, 1:50 IST
ಅಕ್ಷರ ಗಾತ್ರ

ಈರುಳ್ಳಿ ಅಪರೂಪಕ್ಕೊಮ್ಮೆ ಗ್ರಾಹಕರ ಕಣ್ಣೀರಿಗೆ ಕಾರಣವಾದರೆ, ಅದನ್ನು ಬೆಳೆಯುವ ರೈತರಿಗೆ ಆಗಾಗ್ಗೆ ಕಣ್ಣೀರು ಬರಿಸುತ್ತಲೇ ಇರುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ಗಮನಿಸಬೇಕು. ಈ ಬೆಳೆಯಿಂದ ಹೆಚ್ಚಿನ ಲಾಭ ಮಾಡಿಕೊಳ್ಳುವವರು ಮಧ್ಯವರ್ತಿಗಳು. ರೈತ ಈರುಳ್ಳಿ ಬೆಳೆದು ಮಾರುಕಟ್ಟೆಗೆ ತಂದರೆ ಕೆಲವೊಮ್ಮೆ ಕೆ.ಜಿ.ಗೆ ಒಂದು ರೂಪಾಯಿಗೆ ಕೇಳುವುದೂ ಉಂಟು. ಅಂತಹ ಸಂದರ್ಭದಲ್ಲಿ ಬೇರೆ ದಾರಿ ಕಾಣದೆ, ಕಷ್ಟಪಟ್ಟು ಬೆಳೆದ ಈರುಳ್ಳಿಯನ್ನು ರಸ್ತೆಯಲ್ಲಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿರುವುದನ್ನು ನೋಡಿದ್ದೇವೆ. ಇದಕ್ಕೆ ಕಾರಣ ಯಾರು?

ಮಧ್ಯವರ್ತಿಗಳು ರೈತರಿಂದ ಕಡಿಮೆ ಬೆಲೆಗೆ ಈರುಳ್ಳಿಯನ್ನು ಖರೀದಿಸುತ್ತಾರಾದರೂ ಅದು ಮಾರುಕಟ್ಟೆಗೆ ಬರುವ ವೇಳೆಗೆ ಅದರ ಬೆಲೆ ದುಬಾರಿ ಆಗಿರುತ್ತದೆ. ಉತ್ತು ಬಿತ್ತು ಶ್ರಮಪಟ್ಟು ಬೆಳೆಯುವ ರೈತನಿಗೆ ಸಿಗಬೇಕಾದ ಪ್ರತಿಫಲ ಮಧ್ಯವರ್ತಿಗಳಿಗೆ ದಕ್ಕುತ್ತದೆ. ಈ ಅರಿವು ಸರ್ಕಾರಕ್ಕೆ ಇಲ್ಲವೇ? ಕೆ.ಜಿ. ಈರುಳ್ಳಿ ಬೆಲೆ ನೂರು ರೂಪಾಯಿ ದಾಟಿದೆ ಎಂದರೆ, ಮಧ್ಯವರ್ತಿ ಕೃತಕ ಅಭಾವ ಸೃಷ್ಟಿಸಿದ್ದಾನೆ ಎಂದರ್ಥ. ಸರ್ಕಾರವು ಈರುಳ್ಳಿಗೆ ಗರಿಷ್ಠ ಬೆಲೆ ನಿಗದಿ ಮಾಡಿ, ಉಗ್ರಾಣದಲ್ಲಿ ಶೇಖರಣೆಯಾಗಿರುವ ಸರಕನ್ನು ಪತ್ತೆ ಹಚ್ಚಿ, ತುರ್ತಾಗಿ ಗ್ರಾಹಕರ ಹಿತ ಕಾಪಾಡಬೇಕಾಗಿದೆ.

ಸಿ.ಸಿದ್ದರಾಜು ಆಲಕೆರೆ,ಮಂಡ್ಯ

***

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT