ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉಳಿತಾಯ: ಜನಾಕರ್ಷಕ ಆಗಿರಲಿ

Last Updated 17 ಡಿಸೆಂಬರ್ 2019, 19:34 IST
ಅಕ್ಷರ ಗಾತ್ರ

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಇದು, ಆತಂಕಕಾರಿ ನಡೆ. ತಾವು ಕಷ್ಟಪಟ್ಟು ಉಳಿಸಿದ ಹಣವನ್ನುಸಣ್ಣ ಉಳಿತಾಯಗಳಲ್ಲಿ ಠೇವಣಿ ಇಡುವವರು ಸಾಮಾನ್ಯವಾಗಿ ಹಿರಿಯ ನಾಗರಿಕರಾಗಿರುತ್ತಾರೆ. ಇವರಿಗೆ ಈ ಹಣದ ಹೊರತಾಗಿ ಜೀವನ ನಿರ್ವಹಣೆಗೆ ಬೇರಾವ ಸಂಪನ್ಮೂಲಗಳೂ ಇರುವುದಿಲ್ಲ. ಹೀಗಾಗಿ, ತಮ್ಮ ನಿವೃತ್ತಿಯ ನಂತರ ಬಂದ ಇಡುಗಂಟನ್ನು ಸಣ್ಣ ಉಳಿತಾಯಗಳಲ್ಲಿ ತೊಡಗಿಸುವ ಈ ಮಧ್ಯಮ ವರ್ಗದ ಜನ, ಅದರ ಮೂಲಕವೇ ತಮ್ಮ ಬದುಕಿನ ರಥವನ್ನು ಕಷ್ಟದಿಂದಲೇ ಎಳೆಯುತ್ತಾರೆ. ಅಂಚೆ ಕಚೇರಿಯ ಉಳಿತಾಯ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದವು ಸಣ್ಣ ಉಳಿತಾಯ ಯೋಜನೆ ಅಡಿ ಬರುತ್ತವೆ.

90ರ ದಶಕದಲ್ಲಿ ಇವು ಅತ್ಯಂತ ಜನಪ್ರಿಯ ಯೋಜನೆ ಗಳಾಗಿದ್ದು, ವಾರ್ಷಿಕವಾಗಿ ಶೇ 14ರವರೆಗೆ ಬಡ್ಡಿ ನೀಡಲಾಗುತ್ತಿತ್ತು. ನಂತರದ ದಶಕಗಳಲ್ಲಿ ಕ್ರಮೇಣ ಇವುಗಳ ಮೇಲಿನ ಬಡ್ಡಿ ದರ ಕಡಿಮೆಯಾಗುತ್ತಲೇ ಬರುತ್ತಿದೆ. ಪ್ರಸ್ತುತ ಈ ಬಡ್ಡಿ ದರಗಳು ಕೇಂದ್ರ ಸರ್ಕಾರದ ಬಾಂಡುಗಳು ಗಳಿಸುವ ತ್ರೈಮಾಸಿಕ ಇಳುವರಿ ಮೇಲೆ ನಿರ್ಧಾರವಾಗುತ್ತಿದ್ದು, ವಾರ್ಷಿಕ ಬಡ್ಡಿ ದರ ಶೇ 7ರಿಂದ 9ರ ಮಧ್ಯೆ ಇದೆ. ಇವುಗಳನ್ನು
ಮತ್ತಷ್ಟು ಇಳಿಸುವ ವರದಿಯೂ ಮುಖ್ಯವಾಗಿ ಹಿರಿಯ ನಾಗರಿಕರನ್ನು ಚಿಂತೆಗೀಡುಮಾಡಿದೆ‌. ಅವರಷ್ಟೇ ಅಲ್ಲದೆ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಇನ್ನಿತರ ವರ್ಗದ ಜನರ ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ ಬಡ್ಡಿ ದರಗಳನ್ನು ಮತ್ತಷ್ಟು ಇಳಿಸುವ ಪ್ರಸ್ತಾವವನ್ನು ಕೈ ಬಿಡುವುದು ಒಳ್ಳೆಯದು.

ಕೆ.ವಿ.ವಾಸು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT