ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಐಷಾರಾಮಿ ಕ್ಲಬ್‌; ತೆರಿಗೆ ಹಣದಿಂದ ಬೇಡ

Last Updated 22 ಸೆಪ್ಟೆಂಬರ್ 2021, 19:28 IST
ಅಕ್ಷರ ಗಾತ್ರ

ಶಾಸಕರ ಮೋಜು ಮಸ್ತಿಗಾಗಿ ಬೆಂಗಳೂರಿನಲ್ಲಿ ವಿಧಾನಸೌಧಕ್ಕೆ ಹತ್ತಿರ ಇರುವಂತೆ ಐಷಾರಾಮಿ ಕ್ಲಬ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಎಲ್ಲಾ ಶಾಸಕರು ಪಕ್ಷಭೇದ ಮರೆತು ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಎರಡು ಬಾರಿ ಕೋವಿಡ್ ಅಪ್ಪಳಿಸಿ, ಮೂರನೇ ಅಲೆಯ ನಿರೀಕ್ಷೆಯಲ್ಲಿ ಆತಂಕದಿಂದ ಇರುವ ಜನತೆಗೆ ಇದು ಎಂತಹ ಸಂದೇಶ ನೀಡಬಹುದು ಎಂಬ ಅರಿವು ಸರ್ಕಾರಕ್ಕೆ ಇದ್ದಂತಿಲ್ಲ.

ತಾವು ಚೆನ್ನಾಗಿದ್ದರೆ ಇಡೀ ನಾಡೇ ಚೆನ್ನಾಗಿರುತ್ತದೆ ಎಂದು ಶಾಸಕರು ಅಂದುಕೊಂಡಂತಿದೆ. ಶಾಸಕರು ಮಾತ್ರವೇ ಈ ಕ್ಲಬ್ಬನ್ನು ಬಳಸಿಕೊಳ್ಳುತ್ತಾರಾ? ಈ ಕ್ಲಬ್‌ ಶಾಸಕರ, ಮಂತ್ರಿಗಳ ಹಿಂಬಾಲಕರ ಅಡ್ಡಾ ಆಗುವುದರಲ್ಲಿ ಸಂಶಯವೇ ಇಲ್ಲ. ಇದನ್ನು ಜನರ ತೆರಿಗೆ ಹಣದಿಂದ ನಿರ್ಮಿಸುವುದು ಬೇಡ. ಬೇಕಾದರೆ ಶಾಸಕರು ಸ್ವಂತ ಜೇಬಿನಿಂದ ಹಣ ಹಾಕಿ ಬೇರೊಂದು ಕಡೆ ಜಾಗ ಖರೀದಿಸಿ, ಕ್ಲಬ್ ನಿರ್ಮಿಸಿಕೊಳ್ಳಲಿ.

-ವಿ.ತಿಪ್ಪೇಸ್ವಾಮಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT