ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬೇಕು ಉದ್ಯಮ ಪರಿಣತರಿಗೆ ಆದ್ಯತೆ

Last Updated 26 ಸೆಪ್ಟೆಂಬರ್ 2022, 18:55 IST
ಅಕ್ಷರ ಗಾತ್ರ

ವಿಶ್ವವಿದ್ಯಾಲಯಗಳಲ್ಲಿ ಉದ್ಯಮದ ಪರಿಣತರನ್ನು ‘ಪ್ರೊಫೆಸರ್ ಆಫ್ ಪ್ರ್ಯಾಕ್ಟಿಸ್’ ಎಂದು ನೇಮಕ ಮಾಡಿ ಕೊಳ್ಳುವ ವಿಚಾರದಲ್ಲಿ ಯುಜಿಸಿಯ ಆಶಯ ಹಾಗೂ ಪಿಎಚ್.ಡಿ ಪದವಿ ಇಲ್ಲದ ಉದ್ಯಮ ಪರಿಣತರಿಗೆ ಪ್ರಾಧ್ಯಾಪಕ ಪಟ್ಟ ನೀಡುವುದಕ್ಕೆ ಶೈಕ್ಷಣಿಕ ವಲಯದ ವಿರೋಧವಿರುವ ಬಗ್ಗೆ ಡಾ. ಎಚ್.ಆರ್.ಕೃಷ್ಣಮೂರ್ತಿ ಅವರು ವಿವರವಾಗಿ ತಿಳಿಸಿದ್ದಾರೆ (ಪ್ರ.ವಾ., ಸೆ. 24).

ಆದರೆ, ಉದ್ಯಮ ಪರಿಣತರ ತಿಳಿವಿಗೆ ಆಳವಿರುತ್ತದೆ, ಅಗಲ ಇರುವುದಿಲ್ಲ ಎನ್ನುವ ಶೈಕ್ಷಣಿಕ ವಲಯದ ವಾದ ಒಪ್ಪುವಂಥದ್ದಲ್ಲ. ಕೈಗಾರಿಕೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಹತ್ತಾರು ವರ್ಷಗಳ ಕಾಲ ತೊಡಗಿಸಿಕೊಂಡವರಿಗೆ ಬೋಧನೆಯ ಹಂಬಲವೂ ಇದ್ದರೆ ಜ್ಞಾನದ ಅಗಲ ಅನಾಯಾಸವಾಗಿ ಒದಗುತ್ತದೆ. ಉದ್ಯಮ ಕ್ಷೇತ್ರದ ಸಂಶೋಧನೆ ವಿಭಾಗದಲ್ಲಿ ಇಂತಿಷ್ಟು ವರ್ಷಗಳ ಕಾಲ ತೊಡಗಿಸಿಕೊಂಡ ಅಭ್ಯರ್ಥಿಗಳಿಗೆವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಆದ್ಯತೆ ಕೊಡುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ.

⇒ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT